ಬುದ್ಧಿ ಜೀವಿಗಳೇಕೆ ಹಸು ಹತ್ಯೆಗೆ ಮರುಗಲ್ಲ: ಆಂದೋಲಾ ಶ್ರೀ

  |   Yadgirinews

ವಾಡಿ: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಹಾಕುವುದನ್ನು ವಿರೋಧಿಸುವ ಬುದ್ಧಿಜೀವಿಗಳು, ಕೆಲವು ಹಬ್ಬಗಳಲ್ಲಿ ನಾಲೆಗೆ ಹರಿಯುವ ಹಸುವಿನ ರಕ್ತ ಕಂಡೇಕೆ ಮರುಗುವಿದಿಲ್ಲ ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು.

ಕೊಂಚೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಮಹರ್ಷಿ ಸವಿತಾ ಪೀಠದ ವತಿಯಿಂದ ಲೋಕ ಕಲ್ಯಾಣಾರ್ಥ ಏರ್ಪಡಿಸಲಾಗಿದ್ದ ಸುದರ್ಶನ ನಾರಸಿಂಹ ಯಾಗ-ಯಜ್ಞ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದುರ್ದೈವದ ಸಂಗತಿ ಎಂದರೆ ನಾಗ ಪಂಚಮಿಯಂದು ಬಿಲದಿಂದ ಹಾವುಗಳು ಬರುವುದಿಲ್ಲ. ಮನೆಯಿಂದ ಹೊರಗೆ ಬುದ್ಧಿಜೀವಿಗಳು ಬಂದು ರಸ್ತೆ ಮೇಲೆ ನಿಲ್ಲುತ್ತಾರೆ. ಕಲ್ಲಿನ ವಿಗ್ರಹಕ್ಕೆ ಮತ್ತು ಹುತ್ತಕ್ಕೆ ಹಾಲು ಹಾಕಬೇಡಿ ವ್ಯರ್ಥವಾಗುತ್ತದೆ. ಹಾಲು ಅನಾಥ ಮಕ್ಕಳಿಗೆ ಕುಡಿಸಿರಿ ಎಂದು ಈ ಬುದ್ಧಿಜೀವಿ ವಿಷ ಸರ್ಪಗಳು ನಮಗೆ ಉಪದೇಶ ಕೊಡುತ್ತವೆ. ಬರೀ ನಾಗಪಂಚಮಿಯಂದೇ ಏಕೆ ನಿಮಗೆ ಅನಾಥ ಮಕ್ಕಳು ನೆನಪಾಗುತ್ತಾರೆ? ಮರುದಿನ ಇವರಿಗೆ ಅನಾಥರೂ ನೆನಪಾಗಲ್ಲ ಮಕ್ಕಳೂ ನೆನಪಾಗಲ್ಲ. ಮತ್ತೇ ಈ ಹಾವುಗಳು ಬಿಲದಲ್ಲಿ ಕುಳಿತುಕೊಳ್ಳುತ್ತವೆ ಎಂದು ಹರಿಹಾಯ್ದದರು.

ಜಗವೆಲ್ಲ ಸುಖಮಯವಾಗಿರಲು ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಸುದರ್ಶನ ಯಾಗ ಮಾಡುತ್ತಿದ್ದಾರೆ. ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು....

ಫೋಟೋ - http://v.duta.us/5pZOIwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gfkgtAAA

📲 Get Yadgiri News on Whatsapp 💬