ಬೆಳ್ತಂಗಡಿ ಸಂತ್ರಸ್ತರಿಗೆ ಆದಿಚುಂಚನಗಿರಿ ಶ್ರೀ ಸಾಂತ್ವನ: ಮಠದಿಂದ ಮಕ್ಕಳಿಗೆ ಉಚಿತ ಶಿಕ್ಷಣ

  |   Dakshina-Kannadanews

ಬೆಳ್ತಂಗಡಿ: 1961ರ ಬಳಿಕ ನಾಡುಕಂಡ ಭೀಕರ ಪ್ರವಾಹ ಎದುರಾಗಿದೆ. ದುರಂತಕ್ಕೆ ಕಾರಣ ಹಲವಾರು. ಆದರೆ ಮಲೆನಾಡಲ್ಲಿ ಇರುವವರು ತಾವು ಮಾಡದೆ ತಪ್ಪಿಗೆ ಹಾನಿ ಎದುರಿಸುವಂತಾಗಿದೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ಇಂದು ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ‌ ನೀಡಿ ಸಂತ್ರಸ್ತರಿಗೆ ನೆರವು ನೀಡಿದರು.

ಬೆಳ್ತಂಗಡಿ ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬೇರೆಯವರ ಮನೆಯಲ್ಲಿ ಆಶ್ರಯ ಪಡೆದು ಅವರ ಬದುಕನ್ನು ಕಂಡಾಗ ನೋವು, ದುಖಃವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ಸಾಂತ್ವಾನ ಹಾಗು ಕೈಲಾದ ಮಟ್ಟದಲ್ಲಿ ಸಹಾಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಠದಿಂದ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಭಕ್ತರ ಸ್ಥಿತಿ ನೋಡಿ ಹಾನಿ ತುಂಬಿಕೊಡುವ ಕೆಲಸ ಮಾಡಬೇಕಿದೆ ಎಂದು ಸ್ವಾಮೀಜಿಗಳು ಹೇಳಿದರು.

ಈ ಕಾರ್ಯದಲ್ಲಿ ಶ್ರೀಮಠದ ಆದಿಚುಂಚನ ಗಿರಿ ಮಠದಿ ಬೆಳ್ತಂಗಡಿ ಪುತ್ತೂರು, ಸುಳ್ಯ, ವಿಟ್ಲ ಈ ಭಾಗದ ಭಕ್ತರು ಕೈಜೋಡಿಸುವು‌ ಅವಶ್ಯ. ಪ್ರತಿ ಜಾಗಕ್ಕೂ ಭೇಟಿ ನೀಡಿದ್ದೇವೆ. ಮುಖ್ಯವಾಗಿ ಸರಕಾರ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಆದಿಚುಂಚನಗಿರಿ ಸ್ವಾಮೀಜಿಗಳು ಹೇಳಿದರು....

ಫೋಟೋ - http://v.duta.us/ExRmfgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/hNpxDAAA

📲 Get Dakshina Kannada News on Whatsapp 💬