ಮನೆಯಲ್ಲಿ ಮೊಗೆದಷ್ಟು ಮುಗಿಯದ ರಾಡಿ

  |   Gadagnews

ರೋಣ: ತಾಲೂಕಿನ ಹೊಳೆಆಲೂರು, ಮೆಣಸಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಗ್ರಾಮಗಳಲ್ಲಿ ನೀರಿನಲ್ಲಿ ಕೊಚ್ಚಿಬಂದ ಕಸ ಕಡ್ಡಿ, ರಾಡಿ ಎಷ್ಟು ತೊಳೆದರೂ ಮುಗಿಯುತ್ತಿಲ್ಲ. ಸಂತ್ರಸ್ತರಿಗೆ ಸ್ವಚ್ಛತಾ ಕಾರ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪ್ರವಾಹ ಬಂದ ತಕ್ಷಣವೇ ಹಾಕಿದ ಬಟ್ಟೆಯಲ್ಲೇ ಹೋರಬಂದ ಸಂತ್ರಸ್ತರ ಮನೆಯಲ್ಲಿದ್ದ ಆಹಾರ ಪದಾರ್ಥ ಕೊಳೆತು ನಾರುತ್ತಿವೆ. ನದಿ ನೀರು ತಂದು ಬಿಟ್ಟ ಕಸ ವಿಲೇವಾರಿಯಾಗದೇ ಸಾಕ್ರಾಮೀಕ ರೋಗಗಳಿಗೆ ಆಹ್ವಾನ ನೀಡುತ್ತಿವೆ. ರಸ್ತೆ ಹಾಗೂ ಗ್ರಾಮದ ಒಳ ಸಂದಿ ಗೊಂದಿಗಳಲ್ಲಿ ಕಸ ತುಂಬಿ ತುಳುಕುತ್ತಿವೆ. ಗ್ರಾಮಗಳ ಜನತೆ ವಾರದಿಂದ ನಿರಂತರವಾಗಿ ತಮ್ಮ ತಮ್ಮ ಮನೆ ಸ್ವಚ್ಛ ಮಾಡಿ ರಾಡಿ ಹೊರಹಾಕುತ್ತಿದ್ದರೂ ಇನ್ನೂ ಪೂರ್ತಿ ಸ್ವಚ್ಛವಾಗುತ್ತಿಲ್ಲ. ದೊಡ್ಡ ದೊಡ್ಡ ಬಣವೆಗಳು ನೀರಿನಲ್ಲಿ ಮುಳುಗಿದ್ದರಿಂದ ವಟಾರದ ತುಂಬೆಲ್ಲ ನಾರುತ್ತಿದೆ.

ಊರಿನಲ್ಲಿದ್ದ ಎಲ್ಲ ಶುದ್ಧ ನೀರಿನ ಘಟಕಗಳು ಈಗ ಬಂದ್‌ ಆಗಿವೆ. ಪಂಚಾಯತ್‌ ಹಾಗೂ ದಾನಿಗಳಿಂದ ಟ್ಯಾಂಕರ್‌ ಮೂಲಕ ಬರುತ್ತಿರುವ ಕುಡಿಯುವ ನೀರಿಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಹೊಳೆಆಲೂರ ಗ್ರಾಮಕ್ಕೆ ಟ್ರ್ಯಾಕ್ಟರ್‌ ಮೂಲಕ 10 ಟ್ಯಾಂಕರ್‌ ನೀರನ್ನು ನೀಡಿದರೆ ಸಾಲುತ್ತಿಲ್ಲ....

ಫೋಟೋ - http://v.duta.us/lO6ubQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GnQyhAAA

📲 Get Gadag News on Whatsapp 💬