ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಸಂಭ್ರಮ

  |   Yadgirinews

ಕಲಬುರಗಿ: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ನಿಮಿತ್ತ ನಗರದ ಮಠಗಳಲ್ಲಿ ಶನಿವಾರ ಮಧ್ಯಾರಾಧನೆ ಸಂಭ್ರಮದಿಂದ ನೆರವೇರಿತು.

ಜೇವರ್ಗಿ ರಸ್ತೆಯ ಎನ್‌ಜಿಒ ಕಾಲೋನಿಯಲ್ಲಿರುವ ರಾಘವೇಂದ್ರಸ್ವಾಮಿ ಮಠದ ರಾಯರ ರಥ ಬೀದಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಜತ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಗಾಯತ್ರಿ ಯುವ ಸಂಘ, ಪ್ರಸನ್ನ ಮಾರುತಿ ಭಜನಾ ಸಂಘ ಮಂಡಳಿ, ಧ್ಯಾನಾಂಜನೇಯ ಭಜನಾ ಮಂಡಳಿಯವರು ರಥೋತ್ಸವದಲ್ಲಿ ಪಾಲ್ಗೊಂಡು ಗಾಯನ ಸೇವೆ ಸಲ್ಲಿಸಿದರು.

ಬೆಳಗ್ಗೆ ಫಲ, ಪಂಚಾಮೃತ ಅಭಿಷೇಕ, ಅಲಂಕಾರ, ವಿಶೇಷ ಪೂಜೆ-ಪುನಸ್ಕಾರಗಳು ಪಂ. ಗಿರೀಶಾಚಾರ್ಯ ಅವದಾನಿ ಅವರಿಂದ ನಡೆದವು. ನಂತರ ನೈವೇದ್ಯ, ಹಸ್ತೋದಕ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ರಥ ಬೀದಿಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಲಾಗಿತ್ತು.

ರಾಘವೇಂದ್ರಾಚಾರ್ಯ, ಮಾಧವರಾವ್‌ ತಾವರಗೇರಿ, ವಾಸುದೇವರಾವ್‌ ಮುಂಡರಗಿ, ಪ್ರಹ್ಲಾದ ಮಟಮಾರಿ, ನರೇಂದ್ರ ಫಿರೋಜಾಬಾದಕರ್‌, ವೆಂಕಟರಾವ್‌ ಜೋಗೂರ, ರಘು, ಎನ್‌.ವಿ. ಕುಲಕರ್ಣಿ, ಪವನ ಕೋರವಿ, ಪ್ರಸನ್ನ ದೇಶಾಪಂಡೆ, ಪ್ರಮೋದ ಕೋರವಿ, ಮುರಳಿ ಕೆ., ಗುರುರಾಜ ಕೆ., ಶ್ರೀಧರ ಪಾಟೀಲ, ವಾಣಿಶ್ರೀ ಸಾಲಿಮಠ ಹಾಗು ಮತ್ತಿತರರು ಇದ್ದರು....

ಫೋಟೋ - http://v.duta.us/EKq0NgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/fafuBgEA

📲 Get Yadgiri News on Whatsapp 💬