ರೈತರಿಗೆ ವೈಜ್ಞಾನಿಕ ಪರಿಹಾರ ನೀಡಲು ರೈತಸಂಘ ಆಗ್ರಹ

  |   Chamarajanagarnews

ಕೊಳ್ಳೇಗಾಲ: ತಾಲೂಕಿನಲ್ಲಿ ಬರ ಮತ್ತು ಪ್ರವಾಹದಿಂದ ರೈತರ ಬೆಳೆ ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೇರಿ ಮುಖ್ಯ ರಸ್ತೆಗಳ ಮೂಲಕ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿ ತಾಲೂಕು ಕಚೇರಿ ಆವರಣಕ್ಕೆ ಬಂದು ಸೇರಿದರು.

ನಿದ್ದೆಯಿಂದ ಎದ್ದೇಳಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವರಾಮ್‌ ಮಾತನಾಡಿ, ರಾಜ್ಯದ 25 ಸಂಸದರು ಆಯ್ಕೆಗೊಂಡು ಕೇಂದ್ರದಲ್ಲಿ ರೈತರ ಪರ ಹೋರಾಟ ಮಾಡದೆ ನಿದ್ರಿಸುತ್ತಿದ್ದಾರೆಯೇ. ಕೂಡಲೇ ನಿದ್ರಾವಸ್ಥೆಯಿಂದ ಎಚ್ಚೆತ್ತು ರೈತರಿಗೆ ಅನ್ಯಾಯ ಆಗಿರುವುದನ್ನು ಪ್ರಧಾನಿ ಮಂತ್ರಿಗಳ ಗಮನ ಸೆಳೆದು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮತ್ತು ಪ್ರವಾಹದಿಂದ ನಷ್ಟಕ್ಕೂ ವೈಜ್ಞಾನಿಕ ಪರಿಹಾರ ಕೊಡಿಸಿಕೊಡಬೇಕೆಂದು ಒತ್ತಾಯಿಸಿದರು.

ಸೂಕ್ತ ಪರಿಹಾರ ಕಲ್ಪಿಸಿ: ಪ್ರವಾಹದಿಂದ ರೈತರು ಬೆಳೆದಿದ್ದ ಅನೇಕ ಫ‌ಸಲು ನೀರು ಪಾಲಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕೊಡುವಲ್ಲಿ ತಾರತಮ್ಯ ಏಕೆ. ತಾಲೂಕಿನಲ್ಲಿ ಬರಗಾಲ ಇದೆ. ಇದರ ನಡುವೆ ಪ್ರವಾಹದಿಂದ ಬೆಳೆ ಕೊಚ್ಚಿ ಹೋಗಿದ್ದು, ರೈತರು ಜೀವನ ನಡೆಸುವು ದಾದರೂ ಹೇಗೆ?. ಕೂಡಲೇ ಜಿಲ್ಲೆಯ 4 ಶಾಸಕರು ಸೂಕ್ತ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು....

ಫೋಟೋ - http://v.duta.us/ajxy9QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/eq6vAgAA

📲 Get Chamarajanagar News on Whatsapp 💬