ರಾಯಣ್ಣನ ದೇಶಭಕ್ತಿ ಅನನ್ಯ: ಮೃತ್ಯುಂಜಯಶ್ರೀ

  |   Bijapur-Karnatakanews

ವಿಜಯಪುರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ನಾಡಿಗಾಗಿ ಬ್ರಿಟಿಷರ ವಿರುದ್ಧ ತೋರಿದ ಕೆಚ್ಚೆದೆಯ ದೇಶಭ‌ಕ್ತಿ ವರ್ಣಿಸಲು ಶಬ್ದಕೋಶಗಳಲ್ಲಿನ ಪದಗಳೇ ಸಾಲವು ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

ಶನಿವಾರ ನಗರದ ದರ್ಬಾರ್‌ ಹೈಸ್ಕೂಲ್ ಮೈದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಧ್ವಜ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನ ವರ್ಣನೆಗೆ ಮೀರಿದೆ. ಗಾಢ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನಂತ ಪರಾಕ್ರಮಿ ತನ್ನ ತಾಯಿಗಿಂತ ಹೆಚ್ಚಾಗಿ ಪ್ರೀತಿಸಿದ ಚನ್ನಮ್ಮಾಜಿ ಯಲ್ಲಿ ಇರಿಸಿದ್ದ ಅದಮ್ಯ ನಿಷ್ಠೆಯ ಭಕ್ತಿ, ಕಿತ್ತೂರು ನಾಡ ಉಳಿವಿಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಪರಾಕ್ರಮಗಳು ದೇಶದ ಇತಿಹಾಸ ಪುಟಗಳಲ್ಲಿ ಸುವರ್ಣ ಅಕ್ಷರ ಗಳಲ್ಲಿ ದಾಖಲಾಗಿವೆ ಎಂದು ವಿಶ್ಲೇಷಿಸಿದರು.

ವಿಶೇಷ ಉಪನ್ಯಾಸ ನೀಡಿದ ಮೋಹನ ಮೇಟಿ, ದೇಶಭಕ್ತಿ ಹಾಗೂ ನಂಬಿಕೆ-ವಿಶ್ವಾಸಕ್ಕೆ ಮತ್ತೂಂದು ಹೆಸರೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ದೇಶಾಭಿಮಾನದ ಪರ್ಯಾಯ ಹೆಸರೇ ಸಮರವೀರ ಸಂಗೊಳ್ಳಿ ರಾಯಣ್ಣ. ದೇಶಕ್ಕಾಗಿ ತನ್ನನ್ನು ಮುಡಿಪಾಗಿಸಿಕೊಂಡಿದ್ದ ರಾಯಣ್ಣ ಕೇವಲ ಹಾಲುಮತ ಸಮಾಜದ ಆಸ್ತಿಯಲ್ಲ, ಎಲ್ಲ ಸಮಾಜಗಳ ಆಸ್ತಿ. ರಾಷ್ಟ್ರದ ಹುತಾತ್ಮ ನಾಯಕ. ಹೀಗಾಗಿ ಇಂಥ ಮಹಾನ್‌ ಚೇತನವನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು ಎಂದರು....

ಫೋಟೋ - http://v.duta.us/nFYdQwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/jfroGwAA

📲 Get Bijapur Karnataka News on Whatsapp 💬