ರಸ್ತೆ-ಸೇತುವೆ ದುರಸ್ತಿಗೆ 2.68 ಕೋಟಿ ಬಿಡುಗಡೆ

  |   Dharwadnews

ಧಾರವಾಡ: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತ ವರದಿಯನ್ನು ಎಲ್ಲ ಜನಪ್ರತಿನಿಧಿಗಳಿಗೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಸ್ವತ್ತುಗಳ ಹಾನಿ ಪರಿಶೀಲನೆ ಹಾಗೂ ಕಾಮಗಾರಿಗಳ ವೀಕ್ಷಣೆಗೆ ತೆರಳುವಾಗ ಆಯಾ ಭಾಗದ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಸರ್ಕಾರಕ್ಕೆ ಮಳೆಹಾನಿ ವರದಿ ಸಲ್ಲಿಸುವಾಗ ನಿಖರವಾದ ವರದಿ ನೀಡಬೇಕು ಎಂದು ಸೂಚಿಸಿದರು.

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಅಧಿಕಾರಿಗಳು ಜಿಪಂ ಸದಸ್ಯರಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಾಗಿರುವ ಸಾರ್ವಜನಿಕ ಸ್ವತ್ತು ಹಾನಿ, ಮನೆಹಾನಿ ಬಗ್ಗೆ ಮತ್ತು ವಿತರಿಸಿದ ಪರಿಹಾರ ಮೊತ್ತದ ಬಗ್ಗೆ ವರದಿ ನೀಡಬೇಕು ಎಂದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸ್ವತಃ ಕ್ಷೇತ್ರ ಭೇಟಿ ಮಾಡಿ ಖಚಿತಪಡಿಸಿಕೊಂಡು ನೀಡಬೇಕು ಎಂದು ಸೂಚಿಸಿದರು.

2.68 ಕೋಟಿ ಬಿಡುಗಡೆ: ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತ ಮನೋಹರ ಮಂಡೊಲಿ ಮಾತನಾಡಿ, ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ತಮ್ಮ ಇಲಾಖೆ ಅಧೀನದ ರಸ್ತೆ-ಸೇತುವೆಗಳು ಸೇರಿದಂತೆ ಅಂದಾಜು 13.29 ಕೋಟಿ ಮೊತ್ತದ ಸ್ವತ್ತು ಹಾನಿ ಆಗಿದೆ. ಜಿಲ್ಲಾಧಿಕಾರಿಗಳು ತುರ್ತು ಕಾಮಗಾರಿಗಾಗಿ 685.34 ಕಿಮೀ ರಸ್ತೆ ಹಾಗೂ ಸೇತುವೆಗಳ ದುರಸ್ತಿಗಾಗಿ 2.68 ಕೋಟಿ ಮೊತ್ತ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು....

ಫೋಟೋ - http://v.duta.us/Q3KnNAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/jcPxzQAA

📲 Get Dharwad News on Whatsapp 💬