ವಿಶಿಷ್ಟ ಸಂಪ್ರದಾಯ: ಶ್ರಾವಣ ಹೊಸ್ತಿಲ ಪೂಜೆ

  |   Udupinews

ಹೆಬ್ರಿ: ಶ್ರಾವಣ ಹಬ್ಬಗಳು ಶುರುವಾಗುವ ಮಾಸ. ಈ ಮಾಸದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಮಹಿಳೆಯರಿಗೆ ವಿಶೇಷವಾದ ವರ ಮಹಾಲಕ್ಷ್ಮೀ ಪೂಜೆ, ಚೂಡಿಪೂಜೆಗಳು ನಡೆಯುತ್ತವೆ. ಇದರೊಂದಿಗೆ ಹೊಸ್ತಿಲ ಪೂಜೆಯೂ ಮಹತ್ವದ್ದು.

ಹೊಸ್ತಿಲು ಪೂಜೆ ವಿಶೇಷವೇನು?

ಮುತ್ತೈದೆಯರು ತಮಗೆ ಮುತ್ತೈದೆ ಭಾಗ್ಯ ಸದಾ ಇರಲಿ, ಕುಟುಂಬಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ಈ ಪೂಜೆಯನ್ನು ಮಾಡುತ್ತಾರೆ.

ಸೋಣ ಸಂಕ್ರಾಂತಿ ಅಂದರೆ ಆ.17ರ ಸಿಂಹ ಸಂಕ್ರಮಣ ಆರಂಭಗೊಂಡು ಒಂದು ತಿಂಗಳ ಕಾಲ ಈ ಪೂಜೆ ನಡೆಯುತ್ತದೆ. ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿ, ಹೊಸ್ತಿಲನ್ನು ಸ್ವಚ್ಛಗೊಳಿಸಿ ಜೇಡಿ ಮಣ್ಣಿನ ಉಂಡೆಯಿಂದ ಹೊಸ್ತಿಲಿಗೆ ಚಿತ್ತಾರ ಬಿಡಿಸಿ, ಅರಶಿನ ಕುಂಕುಮದಿಂದ ಸಿಂಗಾರ ಮಾಡುತ್ತಾರೆ.

ಹುರುಳಿ ಹೂವಿನ ಶೃಂಗಾರ

ಒಂದು ತಿಂಗಳು ಆಚರಿಸುವ ಹೊಸ್ತಿಲ ಪೂಜೆಗೆ ಹುರುಳಿ ಹೂವಿಗೆ ವಿಶೇಷ ಮಾನ್ಯತೆಯಿದೆ. ಶ್ರಾವಣ ಸಂಕ್ರಾಂತಿಗೆ ಮೂರ್‍ನಾಲ್ಕು ದಿನಗಳಿರುವಾಗ ಮುತ್ತೈದೆ ಯರು ಹುರುಳಿಯನ್ನು ಅರಶಿನ ದೊಡನೆ ಸ್ವಲ್ಪ ನೀರಿನೊಂದಿಗೆ ಕಲಸಿ ನೆನೆಸಿಟ್ಟು ಸಂಕ್ರಾಂತಿಗೆ 2 ದಿನಗಳಿರುವಾಗ ಅದನ್ನು ತೋಟಗಳಲ್ಲಿ ಬಿತ್ತಿ ಹಾಕಿ ಅದಕ್ಕೆ ಗಾಳಿ ತಾಗದಂತೆ ಮುಚ್ಚಿಡುತ್ತಾರೆ. ಎರಡು ದಿನಗಳಲ್ಲಿ ಅರಶಿನ ಬಣ್ಣ ಮೆತ್ತಿಕೊಂಡ ಹುರುಳಿ ಗಿಡ ಮೊಳಕೆಯೊಡೆಯುತ್ತದೆ. ಹಳದಿ ಬಣ್ಣದ ಹೂವಿನಂತೆ ಕಾಣುವ ಇದು ಹೊಸ್ತಿಲು ಪೂಜೆಯಲ್ಲಿ ಮುಖ್ಯ ಸ್ಥಾನ ಪಡೆಯುತ್ತದೆ....

ಫೋಟೋ - http://v.duta.us/4qKWjQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-lGIowAA

📲 Get Udupi News on Whatsapp 💬