ಸಮಸ್ಯೆ ನಿವಾರಣೆಗೆ ಫೋನ್‌ಇನ್‌ ಕಾರ್ಯಕ್ರಮ

  |   Chikkaballapuranews

ಶಿಡ್ಲಘಟ್ಟ: ತಾಲೂಕಿನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಫೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಂದಾಯ ಇಲಾಖೆಯ ಸೇವೆ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಹಶೀಲ್ದಾರ್‌ ಎಂ. ದಯಾನಂದ್‌ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಕರೆಗಳನ್ನು ಸ್ವೀಕರಿಸಿ ಮಾತ ನಾಡಿದ ಅವರು, ಕಂದಾಯ ಇಲಾಖೆಯನ್ನು ಜನ ಸ್ನೇಹಿ ಮಾಡುವ ಸಲುವಾಗಿ ಅನೇಕ ಕಾರ್ಯಕ್ರಮ ಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗು ತ್ತದೆ.

ಪರಿಣಾಮಕಾರಿ ಅನುಷ್ಠಾನ: ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಮಾಸಾಶನ ಮಂಜೂರು ಮಾಡಲು ಪಿಂಚಣಿ ಅದಾಲತ್‌ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಕಂದಾಯ ಅದಾಲತ್‌ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.

ಮಾಸಾಶನ ನೀಡಲು ಲಂಚ: ನಗರದ ಕೃಷ್ಣಮೂರ್ತಿ ಕರೆ ಮಾಡಿ ಪಿಂಚಣಿ ಹಣ ನೀಡಲು ಅಂಚೆ ಪೇದೆಗಳು ಅಕ್ರಮವಾಗಿ ಹಣ ಸ್ವೀಕಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ತಾಲೂಕು ದಂಡಾಧಿ ಕಾರಿಗಳು, ಫ‌ಲಾನುಭವಿಗಳು ಕಡ್ಡಾಯವಾಗಿ ಬ್ಯಾಂಕ್‌ ಖಾತೆ ತೆರೆದು ಆಧಾರ್‌ ಲಿಂಕ್‌ ಮಾಡಿದರೆ ನೇರವಾಗಿ ಫ‌ಲಾನುಭವಿಗಳ ಖಾತೆ ಜಮಾ ಆಗಲಿದೆ ಎಂದು ಸಲಹೆ ನೀಡಿದರು....

ಫೋಟೋ - http://v.duta.us/aJ1pMgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NaLkUwAA

📲 Get Chikkaballapura News on Whatsapp 💬