ಸ್ವಚ್ಛ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ

  |   Chitradurganews

ಹೊಳಲ್ಕೆರೆ: ಸ್ವಚ್ಛ ಭಾರತ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಆಗ ಮಾತ್ರ ಪ್ರತಿಯೊಂದು ಸ್ಥಳವನ್ನು ಸ್ವಚ್ಛವಾಗಿಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

ಪಟ್ಟಣ ಪಂಚಾಯತ್‌ ಸಹಯೋಗದಲ್ಲಿ ಆಯೋಜಿಸಿದ್ದ ‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಐತಿಹಾಸಿಕ ಕಾಲಬೈರವೇಶ್ವರ ಪುಷ್ಕರಣಿ ಸ್ವಚ್ಛತೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಐತಿಹಾಸಿಕ ಪುಷ್ಕರಣಿಯನ್ನು ಉಳಿಸುವ ಕೆಲಸ ಮಾಡಬೇಕು. ಜಲಮೂಲಗಳಾಗಿರುವ ಬಾವಿ, ಹೊಂಡಗಳನ್ನು ಉಳಿಸಿಕೊಳ್ಳುವುದರ ಜತೆ ಅವುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವ ಕೆಲಸ ಆಗಬೇಕು. ನಮ್ಮ

ಸುತ್ತ ಜಲಮೂಲಗಳಾದ ಪುಷ್ಕರಣಿಗಳು, ಹೊಂಡಗಳು, ಬಾವಿಗಳು ಇದ್ದರೂ, ಅವುಗಳನ್ನು ಅಶುದ್ಧಗೊಳಿಸಿ ಬೇರೆ ಕಡೆಯಿಂದ ನೀರು ತರುವಂತೆ ಬಯಸುವುದು ಸರಿಯಾದ ಕ್ರಮವಲ್ಲ. ನಮ್ಮಲ್ಲಿರುವ ನೀರನ್ನು ಸಮರ್ಪಕವಾಗಿ ಉಳಿಸಿಕೊಳ್ಳಲು ಚಿಂತಿಸಬೇಕು. ಇರುವ ನೀರಿನ ಸೌಲಭ್ಯಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದರು.

ಸ್ಥಳೀಯ ಜಲಮೂಲ ಸಂಪತ್ತು ರಕ್ಷಣೆ ಮಾಡಿಕೊಳ್ಳಲು ಸ್ಥಳೀಯವಾಗಿರುವ ಸಂಘಟನೆಗಳ ಸಹಕಾರ ಪಡೆಯಬೇಕು. ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎನ್ನುವ ಭಾವನೆಯನ್ನು ತೊರೆದು ನಮ್ಮ ಗ್ರಾಮದ ಸ್ವಚ್ಛತೆ ನಮ್ಮದೇ ಹೊಣೆ ಎನ್ನುವ ಭಾವನೆ ಬೆಳೆಸಿಕೊಂಡು ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು....

ಫೋಟೋ - http://v.duta.us/VLaSMwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7jZTmwAA

📲 Get Chitradurga News on Whatsapp 💬