24 ಕಡಲ ತೀರಗಳಲ್ಲಿ ಬಿಗಿ ಭದ್ರತೆ

  |   Uttara-Kannadanews

ಕಾರವಾರ: ಕೇಂದ್ರ ಸರ್ಕಾರ ಕರಾವಳಿಯ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಬಂದರು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯಕ್ಕೆ ಸೂಚಿಸಿದ ಪರಿಣಾಮ ಇಲ್ಲಿನ ಕರಾವಳಿ ಕಾವಲು ಪಡೆ ಮತ್ತು ಕೋಸ್ಟ್‌ಗಾರ್ಡ್‌ ಹಾಗೂ ನೇವಿ ಕರಾವಳಿ ತೀರದ ಮೇಲೆ ಕಳೆದ 24 ತಾಸುಗಳಿಂದ ಎಲ್ಲೆಡೆ ಕಣ್ಣಿಟ್ಟಿವೆ. ಕರಾವಳಿ ಮೂಲಕ ಉಗ್ರರು ನುಸುಳಿ ಅನಾಹುತಗಳನ್ನು ಮಾಡಬಹುದು ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಮಾಹಿತಿ ನೀಡಿತ್ತು. ಅಲ್ಲದೇ ಹೈ ಅಲರ್ಟ್‌ ಇರುವಂತೆ ಆದೇಶಿಸಿತ್ತು.

ಕರಾವಳಿ ಕಾವಲು ಪಡೆ ತಾಲೂಕಿನ 8 ಬೀಚ್‌ಗಳ ಮೇಲೆ ನಿನ್ನೆಯಿಂದ ಕಣ್ಣಿಟ್ಟಿದೆ. ಅಲ್ಲದೇ ಕೋಸ್ಟ್‌ಗಾರ್ಡ್‌ ಸಮುದ್ರದಲ್ಲಿ ಗಸ್ತು ತಿರುಗುತ್ತಿದೆ. ನೇವಿ ಸಹ ಕಡಲನ್ನು ಕಾಯುತ್ತಿದ್ದು, ಮೀನುಗಾರಿಕಾ ಬೋಟ್‌ಗಳ ಚಾಲಕರಿಗೆ ಸೂಕ್ತ ಎಚ್ಚರಿಕೆ ಸಹ ನೀಡಲಾಗಿದೆ. ಉತ್ತರ ಕನ್ನಡದ ಬಂದರು, ಮೀನುಗಾರಿಕಾ ಬಂದರುಗಳು ಹಾಗೂ ಬೀಚ್‌ಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ನಾಳೆ ಸಂಜೆಯ ವರೆಗೆ ಕಡಲತೀರ ಮತ್ತು ಕಾಳಿ ಸೇತುವೆ. ಅಣೆಕಟ್ಟುಗಳು ಹಾಗೂ ಕೈಗಾ ಅಣುಸ್ಥಾವರ ಪ್ರದೇಶ ಹಾಗೂ ಸೀಬರ್ಡ್‌ ನೌಕಾನೆಲೆ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ....

ಫೋಟೋ - http://v.duta.us/kYooRgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ybdnCgAA

📲 Get Uttara Kannada News on Whatsapp 💬