3.16 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

  |   Chamarajanagarnews

ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ- ಸುವರ್ಣಾವತಿ ಬಳಿ ಶುಕ್ರವಾರ ಸಂಜೆ 2 ಸಾವಿರ ಮುಖಬೆಲೆಯ 3.16 ಕೋಟಿ ರೂ. ಮೊತ್ತದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನಕಲಿ ನೋಟು ಸಾಗಾಣಿಕೆಯಲ್ಲಿ ಬೆಂಗಳೂರು-ತಮಿಳುನಾಡು ಸಂಪರ್ಕ ಹೊಂದಿರುವ ತಂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಿಂದ ಚಾಮರಾಜನಗರ ಮಾರ್ಗ ತಮಿಳುನಾಡಿಗೆ ಸಾಗಿಸುತ್ತಿದ್ದ 3.16 ಕೋಟಿ ಮೌಲ್ಯದ, ಕಲರ್‌ ಜೆರಾಕ್ಸ್‌ ಮಾಡಿದ 2 ಸಾವಿರ ರೂ. ಮುಖಬೆಲೆಯ, ನಕಲಿ ನೋಟುಗಳನ್ನು ತಾಲಕ್ಕಹೊಳೆ-ಅಟ್ಟುಗುಳಿಪುರದ ಬಳಿ ಶುಕ್ರವಾರ ಸಂಜೆ ಪೂರ್ವ ಠಾಣೆ ಪೊಲೀಸರು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ: ಬೊಲೆರೋ ಪಿಕಪ್‌ ವಾಹನದಲ್ಲಿ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೂರ್ವ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಬಿ. ಪುಟ್ಟಸ್ವಾಮಿ ನೇತೃತ್ವದ ತಂಡ ಶುಕ್ರವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿತು. ಚಿಕ್ಕಹೊಳೆ ಸುವರ್ಣಾವತಿ ಜಲಾಶಯದ ಹತ್ತಿರ ವಾಹನಗಳ ತಪಾಸಣೆ ಮಾಡಲಾಯಿತು. ಈ ವೇಳೆ ಕೆ.ಎ. 05 ಎಜೆ 0374 ನಂಬರಿನ ಬೊಲೆರೋ ಪಿಕಪ್‌ ವಾಹನ ತಪಾಸಣೆ ಮಾಡಿದಾಗ ನಕಲಿ ನೋಟುಗಳು ಕಂಡು ಬಂದವು....

ಫೋಟೋ - http://v.duta.us/LZwIJQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NA_92QEA

📲 Get Chamarajanagar News on Whatsapp 💬