ಸರ್ಕಾರಿ ಸೌಲಭ್ಯ ಸದ್ಬಳಕೆಗೆ ಸಲಹೆ

  |   Belgaumnews

ಕೋಲಾರ: ತಾಲೂಕಿನ ಕುರಗಲ್ ಗ್ರಾಪಂನಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಚೌಡಪ್ಪ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕೃಷಿ, ಪಶುಪಾಲನೆ, ರೇಷ್ಮೆ, ಅರಣ್ಯ, ತೋಟಗಾರಿಕಾ,ಪಶುಪಾಲನಾ ಮತ್ತಿತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಕೇಂದ್ರ-ರಾಜ್ಯ ಸರ್ಕಾರಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುನಿ ರಾಜು, ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸೌಲಭ್ಯ, ಅವುಗಳನ್ನು ಪಡೆದು ಕೊಳ್ಳುವ ಬಗೆ, ನರೇಗಾ ಯೋಜನೆಯಿಂದ ಸಿಗುವ ಸೌಲಭ್ಯ, ಪಾಲಿಹೌಸ್‌ ಸಬ್ಸಿಡಿ ಮತ್ತಿತರ ಯೋಜನೆ ಕುರಿತು ಅಧಿಕಾರಿ ಗಳು ಮಾಹಿತಿ ಒದಗಿಸಲು ಸೂಚಿಸಿದರು.

50 ಸಾವಿರ ರೂ.ರಾಸು ವಿಮೆಗೆ ಸಲಹೆ: ಪಶುಪಾಲನಾ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ರಾಸು ರೋಗಕ್ಕೆ ತುತ್ತಾಗಿ ಸತ್ತರೆ 50 ಸಾವಿರ ರೂ, ಸಹಜ ಸಾವಿಗೆ 10 ಸಾವಿರ ರೂ.ಗಳ ವಿಮೆ ಹಣ ಸಿಗುತ್ತದೆ. ಕುರಿ,ಮೇಕೆಗೂ ವಿಮೆ ಮಾಡಿ ಸಿದ್ದಲ್ಲಿ ಸಹಜ ಸಾವಿಗೆ 5 ಸಾವಿರ ರೂ ಪಡೆದುಕೊಳ್ಳಬಹುದಾಗಿದೆ ಎಂದರು.

ಗ್ರಂಥಾಲಯಕ್ಕಾಗಿ ಹೊಸ ಕಟ್ಟಡ: ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು....

ಫೋಟೋ - http://v.duta.us/YfJKBgEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/bUDr8AAA

📲 Get Belgaum News on Whatsapp 💬