ಸಾಹಿತಿಗಿರಲಿ ವಾಸ್ತವವಾದಿತನ-ಸಾಮಾಜಿಕ ಜವಾಬ್ದಾರಿ

  |   Davanagerenews

ದಾವಣಗೆರೆ: ಕವಿ, ಲೇಖಕ, ಸಾಹಿತಿ ಸದಾ ವಾಸ್ತವವಾದಿತನ ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಖ್ಯಾತ ಸಾಹಿತಿ ಡಾ| ಆನಂದ ಋಗ್ವೇದಿ ಆಶಿಸಿದ್ದಾರೆ.

ಭಾನುವಾರ ರೋಟರಿ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು, ಜನಮಿಡಿತ ದಿನಪತ್ರಿಕೆ, ಭಾವಸಿರಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಅಣಬೇರು ತಾರಕೇಶ್‌ರವರ ಮೂರನೇ ಕವನ ಸಂಕಲನ ಒಂಟಿ ಪಯಣ… ಹಾಗೂ ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ರವರ ಪ್ರಥಮ ಚುಟುಕು ಸಂಕಲನ ಒಡಲ ಹನಿಗಳು… ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕವಿ, ಸಾಹಿತಿ ವರ್ತಮಾನದ ತಲ್ಲಣ, ಸಮಸ್ಯೆಗಳ ಬಗ್ಗೆ ತನ್ನ ಓದುಗರ ಮುಂದೆ ಇಡಬೇಕು. ವರ್ತಮಾನದ ಇತಿಹಾಸಕ್ಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.

ಇಂದಿನ ಆಧುನಿಕರಣ ಕಾಲಘಟ್ಟದಲ್ಲಿ ಮಾನವೀಯತೆ ಕೊರತೆ ಕಾಣಬರುತ್ತಿದೆ. ಭಾವನೆಯ ಪ್ರತೀಕವಾಗಿರುವ ಪ್ರೀತಿ ಎನ್ನುವುದು ತೀರಾ ವ್ಯವಹಾರಿಕ ವಸ್ತುವಿನಂತಾಗುತ್ತಿದೆ. ಅನೇಕ ಕಾರಣಗಳಿಂದ ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒಂಟಿತನದ ಜೀವನ ನಡೆಸುವಂತಾಗಿದೆ. ಅಂತಹ ಒಂಟಿತನದ ಕುರಿತಂತೆ ಅಣಬೇರು ತಾರಕೇಶ್‌ ಒಂಟಿ ಪಯಣ…. ಕವನ ಸಂಕಲನದಲ್ಲಿ ಅನೇಕ ಕವಿತೆಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು....

ಫೋಟೋ - http://v.duta.us/z0LjnwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2LsujAAA

📲 Get Davanagere News on Whatsapp 💬