ಪಶು ಆಹಾರ ಮಳಿಗೆಯಲ್ಲಿ ಕಳವು

  |   Tumkurnews

ಕುಣಿಗಲ್: ರಾಜ್ಯ ಹೆದ್ದಾರಿ 33ರ ಭಕ್ತರಹಳ್ಳಿಯಲ್ಲಿ ಅಂಗಡಿಯ ಛಾವಣಿ ಸೀಟು ತೆಗೆದು ಒಳನುಗ್ಗಿರುವ ಕಳ್ಳರು 8 ಲಕ್ಷ ರೂ. ಮೌಲ್ಯದ ವಸ್ತು ಕಳವು ಮಾಡಿದ್ದಾರೆ.

ಎನ್‌ಎನ್‌ ಎಂಟರ್‌ಪ್ರ್ತ್ರೖಸಸ್‌ ಪಶು ಆಹಾರ ಮಳಿಗೆಯಲ್ಲಿ ಶನಿವಾರ ರಾತ್ರಿ ಮಧ್ಯರಾತ್ರಿ ಕಳ್ಳರು ಮಳಿಗೆ ಛಾವಣಿ ಒಡೆದು ಒಳ ಪ್ರವೇಶಿಸಿ ಸಿ.ಸಿ ಕ್ಯಾಮರಾ, ಕಂಪ್ಯೂಟರ್‌, ಯುಪಿಎಸ್‌ ಹಾಗೂ 600 ಚೀಲ ಬೂಸಾ ಕಳವು ಮಾಡಿ ಪರಾರಿಯಾಗಿದ್ದಾರೆ. ಕುಣಿಗಲ್ ಠಾಣೆಗೆ ದೂರು ನೀಡಲಾಗಿದೆ.

ಎರಡನೇ ಬಾರಿ ಕಳ್ಳತನ: ಒಂದು ವರ್ಷದ ಹಿಂದೆ ಅಪರಿಚಿತರು ಕೆಲಸದವರ ಗಮನ ಬೇರೆಡೆ ಸೆಳೆದು ಕ್ಯಾಶ್‌ ಕೌಂಟರ್‌ನಿಂದ ಸುಮಾರು 2.20 ಲಕ್ಷ ರೂ. ಕಳವು ಮಾಡಿದ್ದರು ಎಂದು ಅಂಗಡಿ ಮಾಲೀಕ ಎಸ್‌.ಸಿ.ನಟರಾಜ ಹೇಳಿದರು.

ದೇವಾಲಯಕ್ಕೂ ಕನ್ನ: ಹಳೆಯ ರಾಷ್ಟ್ರೀಯ ಹೆದ್ದಾರಿ 48ರ ಪಟ್ಟಣದ ಕೆ.ಆರ್‌.ಎಸ್‌ ಅಗ್ರಹಾರದ ಗಣಪತಿ ದೇವಾಲಯಕ್ಕೆ ಅಳವಡಿಸಿದ್ದ ಸಿ.ಸಿ. ಕ್ಯಾಮರಾ ಹಾಗೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಕಳ್ಳರು ದೇವಾಲಯದ ಕಬ್ಬಿಣದ ಬಾಗಿಲಿನ ಬೀಗ ಒಡೆದು ಬೀರು ಜಾಲಾಡಿದ್ದಾರೆ. ಏನೂ ಸಿಗದ ಕಾರಣ ಪಕ್ಕದಲ್ಲೇ ಇದ್ದ ಹುಂಡಿಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಹಣ ದೋಚಿ ದ್ದಾರೆ. ಈ ಸಂಬಂಧ ಪಟ್ಟಣದ ಠಾಣೆಗೆ ದೇವಾಲಯದ ಮುಖ್ಯಸ್ಥರು ದೂರು ನೀಡಿದ್ದಾರೆ....

ಫೋಟೋ - http://v.duta.us/Bb8eNwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/k0XTxgAA

📲 Get Tumkur News on Whatsapp 💬