ಬೋನ್ಹಾಳ ಶಾಲೆಯಲ್ಲಿ ಸೌಕರ್ಯ ಮರೀಚಿಕೆ

  |   Yadgirinews

ಸುರಪುರ: ನೆಪಕ್ಕೆ ಮಾತ್ರವಿರುವ ಕಟ್ಟಡಗಳು, ಕಿತ್ತು ಹೋದ ಛಾವಣಿ ಸಿಮೇಂಟ್, ಶಿಕ್ಷಕರ ಕೊರತೆ, ಜೀವ ಭಯದಲ್ಲೇ ಪಾಠ ಪ್ರವಚನ. ಕುಡಿಯಲೂ ಇಲ್ಲ ನೀರು, ಶೌಚಾಲಯಕ್ಕೆ ಬರ ಇದು ತಾಲೂಕಿನ 10 ಕಿ.ಮೀಟರ್‌ ಅನತಿ ದೂರದಲ್ಲಿರುವ ಬೋನ್ಹಾಳ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಣ.

ಇವೆಲ್ಲ ಅವಾಂತರಗಳನ್ನು ಗಮನಿಸಿದಾಗ ಬೋನ್ಹಾಳ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದೆ ಎಂಬುದನ್ನು ತಾಲೂಕು ಶಿಕ್ಷಣ ಇಲಾಖೆ ಮರೆತು ಬಿಟ್ಟಿದೆ. ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 365 ವಿದ್ಯಾರ್ಥಿಗಳು ಇದ್ದು, 206 ಬಾಲಕರು, 159 ಬಾಲಕಿಯರಿದ್ದಾರೆ. 9 ಶಿಕ್ಷಕರ ಮಂಜೂರಾತಿಯಿದೆ. ಆಶ್ಚರ್ಯವೆಂದರೆ ಇಷ್ಟೊಂದು ವಿದ್ಯಾರ್ಥಿಗಳಿಗೆ ಕೇವಲ ಮೂವರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿಥಿಲಾವಸ್ಥೆ ಕೊಠಡಿ: ಶಾಲೆಗೆ 9 ಕೊಠಡಿಗಳಿದ್ದು, ಬಹುತೇಕ ಎಲ್ಲ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿವೆ. ಅದರಲ್ಲಿ ನಾಲ್ಕು ಕೊಠಡಿಗಳು ಮುಟ್ಟಿದರೆ ಬೀಳುವ ಹಂತದಲ್ಲಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಸಮರ್ಪಕವಾಗಿ ಗಾಳಿಯು ಒಳ ನುಸಳಿದಂತಿದೆ.

ಶೌಚಾಲಯಕ್ಕೆ ಪರದಾಟ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಿಕೊಡಲು ಸರ್ಕಾರ ನೀರಿನಂತೆ ಹಣ ಹರಿಸುತ್ತಿದೆ. ಆದರೆ, ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು ಬಯಲು ಶೌಚವನ್ನೇ ಅವಲಂಬಿಸಿದ್ದಾರೆ....

ಫೋಟೋ - http://v.duta.us/B2ZfDQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lPTDTwAA

📲 Get Yadgiri News on Whatsapp 💬