ಮಾರುಕಟ್ಟೆಯಲ್ಲಿ ಗೌರಿ-ಗಣೇಶ ಹಬ್ಬದ ಸಡಗರ

  |   Kolar-Karnatakanews

ಕೋಲಾರ: ಈ ಬಾರಿ ಗೌರಿ-ಗಣೇಶ ಹಬ್ಬಗಳೆರಡೂ ಒಂದೇ ದಿನ ಬಂದಿದ್ದು, ದಿನಸಿ ದುಬಾರಿಯಾದರೂ ಹೂ, ಹಣ್ಣಿನ ದರ ಸ್ವಲ್ಪ ಕಡಿಮೆಯಾಗಿದ್ದರಿಂದ ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮಾರುಕಟ್ಟೆಯಲ್ಲಿ ಭಾನುವಾರ ಹಬ್ಬದ ಖರೀದಿ ಜೋರಾಗಿಯೇ ನಡೆಯಿತು.

ಗೌರಿಹಬ್ಬ ಕೆಲವೊಂದು ಸಮುದಾಯಗಳಿಗೆ ಸೀಮಿತವಾಗಿದ್ದು, ಗಣೇಶನ ಹಬ್ಬ ಪ್ರತಿಯೊಬ್ಬರೂ ಆಚರಣೆ ಮಾಡುತ್ತಾರೆ. ಜೊತೆಗೆ ಗಲ್ಲಿಗೊಂದರಂತೆ ಸಾಮೂಹಿಕ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ. ಎಲ್ಲಿ ನೋಡಿದರೂ ಗಣಪನ ಪ್ರತಿಷ್ಠಾಪನೆ ಸಿದ್ಧತೆ ಕಂಡುಬಂತು. ಗೌರಿ ಹಬ್ಬವನ್ನು ಬೆಳಗ್ಗೆ 9.10 ಗಂಟೆಯೊಳಗೆ ಮುಗಿಸಿ, ನಂತರ ಇಡೀ ದಿನ ಗಣಪನ ಹಬ್ಬ ಆಚರಣೆಗೆ ಮಹಿಳೆಯರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಚಾರ ಬಂದ್‌: ಹಬ್ಬದ ಖರೀದಿಗೆಂದೇ ಖ್ಯಾತಿ ಪಡೆದ ದೊಡ್ಡಪೇಟೆಯಲ್ಲಿ ಹಣ್ಣು, ಹೂವು, ದಿನಸಿ ಅಂಗಡಿಗಳು ತಲೆಎತ್ತಿದ್ದರಿಂದ ಸಂಚಾರ ಬಂದ್‌ ಮಾಡಲಾಗಿತ್ತು. ಸಾಲುಸಾಲು ಹಣ್ಣಿನ ಅಂಗಡಿಗಳು, ಫ‌ುಟ್ಪಾತ್‌ಗಳಲ್ಲಿ ಹೂವು, ಬಾಳೆಕಂದು, ಗಣೇಶನ ಮೂರ್ತಿ ಅಲಂಕರಿಸಲು ಬೇಕಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ವ್ಯಾಪಾರಿಗಳು, ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ದೊಡ್ಡಪೇಟೆ, ಎಂ.ಜಿ.ರಸ್ತೆಯಿಂದ ಪ್ರವೇಶ ಮಾರ್ಗ, ಕಾಳಮ್ಮ ಗುಡಿ ಸಮೀಪ ರಸ್ತೆಗಳನ್ನು ಸಂಚಾರಿ ಪೊಲೀಸರು ಬಂದ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಹಣ್ಣಿನ ಅಂಗಡಿಗಳು ತಾತ್ಕಾಲಿಕವಾಗಿ ಟೆಂಟ್ ಹಾಕಿದ್ದವು....

ಫೋಟೋ - http://v.duta.us/5Cjl-QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lBXz0QAA

📲 Get Kolar Karnataka News on Whatsapp 💬