ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕ್ಷಣಗಣನೆ

  |   Uttara-Kannadanews

ಶಿವಮೊಗ್ಗ: ರಾಜ್ಯದ ಅತೀದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಕ್ಷಣಗಣನೆ ಪ್ರಾರಂಭವಾಗಿದೆ. ಲಿಂಗನಲಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಾಗಿವೆ. ಈ ಬಾರಿ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬಂದಿದ್ದು ಇದೀಗ ಜಲಾಶಯದಲ್ಲಿ 1818.50 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಈ ಕಾರಣದಿಂದ ಮುಂಜಾಗರುಕತಾ ಕ್ರಮವಾಗಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರನ್ನು ಶರಾವತಿ ನದಿಗೆ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.

ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಶರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ ಎಂದು ನದೀ ಪಾತ್ರದ ಜನರಿಗೆ ಕೆ.ಪಿ.ಸಿ. ಸಿಬಂದಿ ಮುನ್ನೆಚ್ಚರಿಕೆ ನೀಡಿದ್ದಾರೆ. ಜಲಾಶಯದ ಮೂರು ಕ್ರಸ್ಟ್ ಗೇಟ್ ಗಳಿಂದ ಈ ಹೆಚ್ಚುವರಿ ನೀರನ್ನು ಶರಾವತಿ ನದಿಗೆ ಬಿಡಲಾಗುತ್ತಿದೆ.

ಸಾಗರ ತಾಲೂಕಿನ ಕರ್ಗಲ್ ಗ್ರಾಮದ ಬಳಿ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಆಣೆಕಟ್ಟು 193 ಅಡಿಗಳಷ್ಟು ಎತ್ತರವಿದೆ. ಆಣೆಕಟ್ಟಿನ ಉದ್ದ 2.4 ಕಿಲೋವೀಟರ್ ಗಳಾಗಿದೆ. 151.75 ಟಿ.ಎಂ.ಸಿ. ನೀರನ್ನು ಶೇಖರಿಸುವ ಸಾಮರ್ಥ್ಯ ಈ ಜಲಾಶಯಕ್ಕಿದೆ. 1964ರಲ್ಲಿ ಈ ಜಲಾಶಯ ನಿರ್ಮಾಣಗೊಂಡಿತ್ತು.

ಫೋಟೋ - http://v.duta.us/0i27aAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/6D67GAAA

📲 Get Uttara Kannada News on Whatsapp 💬