ಸ್ಮಾರಕಗಳ ಮೌಲ್ಯ ಕಳೆಯುತ್ತಿದೆ ಕೊಳಕು

  |   Bijapur-Karnatakanews

ವಿಜಯಪುರ: ಪಾರಂಪರಿಕ ನಗರಿ ಎಂಬ ಹಿರಿಮೆ ಸಂಪಾದಿಸಿರುವ ವಿಜಯಪುರ ನಗರ ಇದೀಗ ಕೊಳಚೆಪುರ ಎಂಬ ಕುಖ್ಯಾತಿ ಪಡೆಯುವ ದುಸ್ಥಿತಿಗೆ ತಲುಪಿದೆ. ನಗರದಲ್ಲಿರುವ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ, ಇತಿಹಾಸದ ಅಧ್ಯಯನಕ್ಕೆ ಬರುವ ದೇಶಿ-ವಿದೇಶಿ ಪ್ರವಾಸಿಗರಿಗೆ ಕಂದಕಗಳ ಕೊಳಕು ಮೂಗು ಮುಚ್ಚುವಂತೆ ಮಾಡುತ್ತಿದೆ.

ಪಾರಂಪರಿಕ ಕಂದಕಕ್ಕೆ ಸೇರುತ್ತಿರುವ ಚರಂಡಿ ನೀರು, ಸ್ಮಾರಕಗಳ ಬಳಿ ಬಯಲು ಬಹಿರ್ದೇಸೆ, ತಿಪ್ಪೆ ಗುಂಡಿಗಳಿಂದಾಗಿ ಮಾಲಿನ್ಯ-ದುರ್ವಾಸನೆ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಈ ದುರವಸ್ಥೆ ನಿವಾರಣೆ ವಿಷಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ವಿಜಯಪುರ ಶಾಹಿ ಆರಸರ ರಾಜಧಾನಿಯಾಗಿತ್ತು. ಶಾಹಿ ವಂಶದ ಸಂಸ್ಥಾಪಕ ಯಸೂಫ್ ಆದಿಲ್ ಶಹಾ ರಾಜಧಾನಿವಾಸಿ ಪ್ರಜೆಗಳ ಸುರಕ್ಷತೆಗಾಗಿ ಸುಮಾರು 10 ಕಿ.ಮೀ. ಸುತ್ತಲೂ ಕಲ್ಲುಗಳಿಂದ ಬೃಹತ್‌ ಕೋಟೆ ಕಟ್ಟಿಸಿದ್ದು, ಕೋಟೆ ಸುತ್ತಲೂ ಹೊರ ಪರಿಧಿಯಲ್ಲಿ ಕಂದಕ ನಿರ್ಮಿಸಿದ್ದಾನೆ. ಮತ್ತೂಂದೆಡೆ ರಾಜಧಾನಿಯಲ್ಲಿ ತನ್ನ ಅರಮನೆ ಸುತ್ತಲೂ ಅರೆಕಿಲ್ಲಾ ಎಂಬ ಕೋಟೆಯನ್ನೂ ನಿರ್ಮಿಸಿದ್ದಾನೆ.

ವಿಜಯನಗರ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿ ವಿಜಯ ಸಾಧಿಸಿದ ಸ್ಮರಣೆಗಾಗಿ ಅಲಿ ಆದಿಲ್ ಶಹಾ ಅರೆಕಿಲ್ಲಾ ಕೋಟೆಯನ್ನು ನಿರ್ಮಿಸಿದ್ದು, ಕೋಟೆ ಹೊರ ಭಾಗದಲ್ಲಿ 6 ಮೀ. ಅಳದ ಹಾಗೂ 12ರಿಂದ 15 ಮೀ. ಅಗಲದ ಬೃಹತ್‌ ಕಂದಕ ನಿರ್ಮಿಸಿದ್ದಾನೆ. ರಾಜಧಾನಿ ಹಾಗೂ ಅರಮನೆ ಸುತ್ತಲೂ ನಿರ್ಮಿಸಿರುವ ಕೋಟೆ-ಆರೆಕಿಲ್ಲಾ ಕಂದಕಗಳಲ್ಲಿ ನಿರಂತರ ನೀರು ಇರಿಸಿ, ಇದರಲ್ಲಿ ಮೊಸೆಳಗಳನ್ನು ಇರಿಸಿದ್ದ. ಇದರಿಂದ ವಿಜಯನಗರದ ಆರಸರು ಸೇರಿದಂತೆ ಯಾವುದೇ ವೈರಿ ರಾಜರು ಸುಲಭವಾಗಿ ತನ್ನ ಕೋಟೆಯನ್ನು ಬೇಧಿಸದಂತೆ ವಿಶಿಷ್ಟ ರೀತಿಯಲ್ಲಿ ಜಲಕೋಟೆ ನಿರ್ಮಿಸಿದ್ದ. ಅರೆಕಿಲ್ಲಾ ಪ್ರದೇಶದಲ್ಲಿ ಶಾಹಿ ದೊರೆ ಎರಡನೇ ಅಲಿ ಆದಿಲ್ ಶಹಾ ಗಗನ ಮಹಲ್ ಎಂಬ ಮಹಲ್ ನಿರ್ಮಿಸಿದ್ದು, ಇದರ ಪಕ್ಕದಲ್ಲೇ ಕಂದಕವೂ ಇದೆ. ಕಂದಕದಲ್ಲಿ ಈ ಹಿಂದೆ ಶಾಹಿ ಅರಸರ ಜಲ ಸಂರಕ್ಷಣೆ ಹಾಗೂ ವಿಶಿಷ್ಟ ತಾಂತ್ರಿಕತೆಯಿಂದ ಕಂದಕದಲ್ಲಿ ನಿರಂತರ ನೀರು ನಿಲ್ಲುವ ವ್ಯವಸ್ಥೆ ಮಾಡಿದ್ದರು....

ಫೋಟೋ - http://v.duta.us/8j8RNAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/E9lJHAAA

📲 Get Bijapur Karnataka News on Whatsapp 💬