ಅನ್ನದಾತನ ಬದುಕಿಗೆ ಬರಗಾಲ ಬರ

  |   Gadagnews

ನರೇಗಲ್ಲ: ಬರಗಾಲ ಅನ್ನದಾತನ ಬದುಕಿಗೆ ಮತ್ತೂಮ್ಮೆ ಬರೆ ಎಳೆದಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿದ್ದು, ಕೀಟ ಬಾಧೆಯೂ ಕೆಲವೆಡೆ ಕಂಡುಬರುತ್ತಿದೆ. ಇದರಿಂದ ರೈತರು ತತ್ತರಿಸಿಹೋಗಿದ್ದಾರೆ. ಒಂದೊಮ್ಮೆ ಮಳೆಯಾದರೆ ಹೊಸ ಬೆಳೆ ತೆಗೆಯುವ ಉದ್ದೇಶದಿಂದ ಒಣಗಿ ನಿಂತ ಬೆಳೆಗಳನ್ನು ಹರಗುವ (ಹಾಳು ಮಾಡುವ)ಕೆಲಸವನ್ನು ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ರೈತರು ಮುಂದುವರಿಸಿದ್ದಾರೆ.

ಕಳೆದ ಜೂನ್‌ ತಿಂಗಳ ಮುಂಗಾರು ಆರಂಭದಲ್ಲಿ ಮಳೆಯು ಬಿತ್ತನೆಗೆ ಆಸೆ ತೋರಿಸಿದ್ದರಿಂದ ರೈತರು ಹತ್ತಿ, ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ಅಲಸಂದಿ, ಈರುಳ್ಳಿ, ಮೆಣಸಿಕಾಯಿ ಸೇರಿದಂತೆ ನಾನಾ ಬೆಳೆಯನ್ನು ಬಿತ್ತನೆ ಮಾಡಿದ್ದರು. ಬಿತ್ತನೆ ಬಳಿಕ ಒಮ್ಮೆಯು ಕೂಡ ಮಳೆ ಸರಿಯಾಗಿ ಸುರಿದಿಲ್ಲ. ಹೀಗಾಗಿ ಬೆಳೆದು ನಿಂತ ಬೆಳೆ ಒಣಗಿ ಸಂಪೂರ್ಣ ಹಾಳಾಗಿದೆ. ರವಿವಾರ ಜಕ್ಕಲಿ ಗ್ರಾಮದ ರೈತರು ಅಲಸಂದಿ ಬೆಳೆಯನ್ನು ನಾಶಪಡಿಸಿದ್ದಾರೆ. ಸುಮಾರು 21 ಎಕರೆ ಜಮೀನಿನಲ್ಲಿ ಅಲಸಂದಿ ಬೆಳೆದಿದ್ದರು. ಮಳೆ ಮತ್ತು ಕೀಟ ಬಾಧೆಯಿಂದ ಇಳುವರಿ ಒಣಗಲು ಶುರುವಾಗಿತ್ತು. ಜಮೀನಿನಲ್ಲಿ ಬೆಳೆ ಬಿಟ್ಟರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಅರಿತು ಟ್ರ್ಟಾಕ್ಟರ್‌ ಬಳಸಿ ನಾಶಗೊಳಿಸಿದ್ದಾರೆ. ಆದರೆ, ಅನ್ನದಾತನ ಕೈಗೆ ಹತ್ತು ಪೈಸೆಯೂ ಬಂದಿಲ್ಲ....

ಫೋಟೋ - http://v.duta.us/IKHhVQEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/z8J7QgAA

📲 Get Gadag News on Whatsapp 💬