ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಜಡ್ಜ್ ಅಲ್ಲ – ಯತ್ನಾಳ

  |   Karnatakanews

ವಿಜಯಪುರ : ಅನರ್ಹ ಶಾಸಕರ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ಇದ್ದು, ತೀರ್ಪು ಯಾರ ಪರ ಬರಲಿದೆ ಎಂದು ಹೇಳಲು ನಾನು ಜಡ್ಜ್ ಅಲ್ಲ. ನ್ಯಾಯಾಲಯದಲ್ಲಿ ಇರುವ ಪ್ರಕರಣದ ಕುರಿತು ನಾನು ತೀರ್ಪು ಹೇಳಿದ್ದರೆ ಕೋರ್ಟ್ ನನ್ನನ್ನು ಜೈಲಿಗೆ ಹಾಕುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾರ್ಮಿಕ ಪ್ರತಿಕ್ರಿಯೆ ನೀಡಿದರು.

ಸೋಮವಾರ ನಗರದಲ್ಲಿ ಪತ್ರಕರ್ತರು ಅನರ್ಹ ಶಾಸಕರ ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದ ಅವರು, ಒಳ್ಳೆಯ ಫಲಿತಾಂಶ ಬರುತ್ತದೆ‌. ಅನರ್ಹ ಶಾಸಕರಿಗೆ ಪುನರ್ಜನ್ಮ ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ‌ ಎಂದು ಹೇಳಲು ನಾನು ಭವಿಷ್ಯ ಹೇಳುವ ಜ್ಯೋತಿಷಿಯೂ ಅಲ್ಲ. ಈ ಕುರಿತು ಜನರು ತೀರ್ಪು ಕೊಡುತ್ತಾರೆ ಅಲ್ಲಿಯವರೆಗೆ ಕಾದು ನೋಡೋಣ ಎಂದರು.

ತಮ್ಮ ನೇತೃತ್ವ ಕಾಂಗ್ರೆಸ್ ಮೈತ್ರಿ ಸರಕಾರ ಕೆಟ್ಟ ಸರ್ಕಾರವಾಗಿತ್ತು ಎಂದು ಒಪ್ಪಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆತ್ಮಾವಲೋಕನ ಆಗಿದ್ದು, ಈಗ ಜ್ಞಾನೋದಯ ವಾಗಿದೆ ಎಂದು ಟಾಂಗ್ ಕೊಟ್ಟು ಹೇಳಿದರು....

ಫೋಟೋ - http://v.duta.us/E2PLvwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/VnxuiwAA

📲 Get Karnatakanews on Whatsapp 💬