ಅನರ್ಹ ಶಾಸಕರ ಭವಿಷ್ಯ ಇಂದು? ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

  |   Karnatakanews

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದ ಅನರ್ಹ ಶಾಸಕರು ಸೇರಿ ಎಲ್ಲರ ಚಿತ್ತ ಈಗ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ. ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದ್ದು, ನಿರಾಳತೆ ಸಿಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.

ಅನರ್ಹ ಶಾಸಕರು ದಿಲ್ಲಿಯಲ್ಲಿಯೇ ಬೀಡುಬಿಟ್ಟು ತಮ್ಮ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಸಮಾ ಲೋಚನೆ ನಡೆಸಿ ತಮಗೆ ಸುಪ್ರೀಂ ನಿರಾಳತೆ ನೀಡಲಿದೆ ಎಂಬ ವಿಶ್ವಾಸ ದಲ್ಲಿದ್ದಾರೆ. ಜತೆಗೆ ಸೆ.30ರೊಳಗೆ ಸುಪ್ರೀಂ ಕೋರ್ಟ್‌ ಒಂದು ಅಂತಿಮ ತೀರ್ಮಾನಕ್ಕೆ ಬರಲಿದ್ದು, ಚುನಾ ವಣೆಗೆ ಸ್ಪರ್ಧಿಸುವ ತಮ್ಮ ಹಾದಿ ಸುಗಮ ವಾಗಲಿದೆ ಎಂದು ಅನರ್ಹ ಶಾಸಕರು ನಂಬಿದ್ದಾರೆ.

ಅನರ್ಹ ಶಾಸಕರ ಮುಂದಿರುವ ತತ್‌ಕ್ಷಣದ ಆಯ್ಕೆ ಗಳೆಂದರೆ ತಮ್ಮನ್ನು ಅನರ್ಹಗೊಳಿಸಿ ಸ್ಪೀಕರ್‌ ಹೊರಡಿ ಸಿರುವ ಆದೇಶಕ್ಕೆ ತಡೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬೇಕು ಅನ್ನುವುದನ್ನು ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿಕೊಳ್ಳಬಹುದು. ಇದಕ್ಕೆ ತಮಿಳುನಾಡಿನ ಎಐಎಡಿಎಂಕೆ 18 ಮಂದಿ ಅನರ್ಹ ಶಾಸಕರ ಪ್ರಕರಣದ ಉದಾಹರಣೆ ಕೊಡಬಹುದು. ಇಲ್ಲವೇ ತಮ್ಮ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಚುನಾವಣೆಗೆ ತಡೆ ನೀಡಬೇಕು ಎಂದು ಕೇಳಬಹುದು....

ಫೋಟೋ - http://v.duta.us/0j_WGQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/mEGWzgAA

📲 Get Karnatakanews on Whatsapp 💬