ಅಂಬಲಪಾಡಿ,ಅಂಬಾಗಿಲು,ಸಂತೆಕಟ್ಟೆಯಲ್ಲಿ ಅಪಘಾತಗಳ ಸರಮಾಲೆ

  |   Udupinews

ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಾಮದಾಯಕ, ಸುಖಕರ, ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದೆಂದು ಭಾವಿಸಿದರೆ ತಪ್ಪಾಗಬಹುದು. ಕೃಷ್ಣನ ನಾಡಿಗೆ ಪ್ರವೇಶಿಸಿದೊಡನೆ ನಿಮಗೆ ಅಪಾಯಕಾರಿ ಜಂಕ್ಷನ್‌ಗಳು ಎದುರಾಗುತ್ತವೆ. ಅಂಬಲಪಾಡಿ, ನಿಟ್ಟೂರು, ಅಂಬಾಗಿಲು ಮತ್ತು ಸಂತೆಕಟ್ಟೆಯಲ್ಲಿ ಪ್ರಯಾಣಿಸುವಾಗ ಸವಾರರು ಗಂಭೀರ ಎಚ್ಚರ ವಹಿಸುವುದು ಅತ್ಯಗತ್ಯ.

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಉಡುಪಿ ನಗರ ಪ್ರವೇಶಿಸುವವರು ಈ ಎರಡು ಪ್ರಮುಖ ಜಂಕ್ಷನ್‌ಗಳಲ್ಲಿ ಎಚ್ಚರ ಕಾಯ್ದುಕೊಳ್ಳಬೇಕು: ಒಂದು ಅಂಬಲಪಾಡಿ. ಮತ್ತೂಂದು ಅಂಬಾಗಿಲು ಜಂಕ್ಷನ್‌. ಇಲ್ಲಿ ಅಪಘಾತಗಳು ಸಾಮಾನ್ಯ. ಅನೇಕ ಮಂದಿ ಜೀವ ಕಳೆದುಕೊಂಡರೂ ಸರಿಯಾದ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ.

ಬ್ರಹ್ಮಗಿರಿ-ಅಂಬಲಪಾಡಿ ಮುಖ್ಯರಸ್ತೆಗಳು ಸಂಧಿಸುವ ಈ ಸ್ಥಳ ವಾಹನ ಚಾಲಕರು, ಪಾದ ಚಾರಿಗಳಲ್ಲಿ ಸದಾ ಗೊಂದಲ ಮೂಡಿಸುತ್ತಲೇ ಇರುತ್ತದೆ. ಯಾವ ಕಡೆಗೆ ಯಾವ ವಾಹನಗಳು ಹೋಗುತ್ತವೆ ಎಂದು ತಿಳಿಯುವುದೇ ಇಲ್ಲ. ಪಾದಚಾರಿಗಳಂತೂ ರಸ್ತೆ ದಾಟಲು ಯೋಚಿಸುವಷ್ಟರಲ್ಲಿ ಇನ್ನೊಂದು ಕಡೆಯಿಂದ ವಾಹನಗಳು ನುಗ್ಗುವ ಅಪಾಯವಿದ್ದದ್ದೇ.

ಫ್ಲೈ ಓವರ್‌ಗಾಗಿ ನಡೆದ ಪ್ರತಿಭಟನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೊಪ್ಪು ಹಾಕಲಿಲ್ಲ. ಕನಿಷ್ಠ ಪಾದಚಾರಿಗಳು ಸುರಕ್ಷಿತ ವಾಗಿ ಅತ್ತಿಂದಿತ್ತ ಸಂಚರಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಿಲ್ಲ. ಕೆಲವೊಮ್ಮೆ ಪೊಲೀಸ್‌ ಸಿಬಂದಿ ಇಲ್ಲಿ ಕಾರ್ಯ ನಿರ್ವಹಿಸಿದರೂ ಬಹುತೇಕ ಹೊತ್ತು ಇಡೀ ಜಂಕ್ಷನ್‌ ಅನಾಥ. ಈ ಹೊತ್ತಿನಲ್ಲಿ ಎಲ್ಲ ಕಡೆಯಿಂದಲೂ ವಾಹನ ಸವಾರರು ನುಗ್ಗುತ್ತಲೇ ಇರುತ್ತಾರೆ....

ಫೋಟೋ - http://v.duta.us/66lfBwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/uePOHAAA

📲 Get Udupi News on Whatsapp 💬