ಇಂದಿರಾ ಕ್ಯಾಂಟೀನ್‌ ಇನ್ನು ಆನ್‌ಲೈನ್‌!

  |   Karnatakanews

ಕೊಪ್ಪಳ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆಯ ಪ್ರತಿಯೊಂದು ಮಾಹಿತಿಯೂ ಇನ್ಮುಂದೆ ಆನ್‌ಲೈನ್‌ನಲ್ಲಿ ಸಂಗ್ರಹವಾಗಲಿದೆ. ಪ್ರತಿ ನಿತ್ಯ ಜನತೆ ಊಟ, ಉಪಾಹಾರ ಪಡೆದ ವಿವರ ಜತೆಗೆ ಕ್ಯಾಂಟೀನ್‌ನಲ್ಲಿ ಸಿದ್ಧಗೊಳ್ಳುವ ಪದಾರ್ಥ ವೀಕ್ಷಣೆಗೆ ಅಧಿಕಾರಿ ವರ್ಗ ನಿತ್ಯ ಬಂದು ಪರೀಕ್ಷೆ ಮಾಡಿ ಆನ್‌ಲೈನ್‌ ಸಹಿ ಮಾಡುವ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆಯಡಿ 160 ಇಂದಿರಾ ಕ್ಯಾಂಟೀನ್‌ಗಳು ನಡೆಯುತ್ತಿದ್ದು, ಆ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ನಡೆಯುವ ಕಾರ್ಯ ಚಟುವಟಿಕೆಗಳ ಮಾಹಿತಿ ಕುಳಿತ ಸ್ಥಳದಲ್ಲೇ ದೊರೆಯಲಿದೆ.

ಸಿದ್ದರಾಮಯ್ಯ ಸರ್ಕಾರ ನಗರ ಪ್ರದೇಶದ ಜನತೆಗೆ ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿ ಉಪಾಹಾರಕ್ಕೆ 5 ರೂ., ಊಟಕ್ಕೆ 10 ರೂ. ನಿಗದಿ ಮಾಡಿ ಚಾಲನೆ ನೀಡಿದ್ದರು. 248 ಕ್ಯಾಂಟೀನ್‌ ಆರಂಭವಾಗಬೇಕಿದ್ದರೂ ಪ್ರಸ್ತುತ 160 ಕ್ಯಾಂಟೀನ್‌ಗಳು ಜನತೆಗೆ ಸೇವೆ ನೀಡುತ್ತಿವೆ. ಆ ಮಾಹಿತಿ ಇನ್ಮುಂದೆ ಆನ್‌ಲೈನ್‌ನಲ್ಲೇ ದಾಖಲಿಸಬೇಕಿದೆ.

ಆನ್‌ಲೈನ್‌ನ ವಿಶೇಷತೆ?: ಪ್ರಸ್ತುತ ಕ್ಯಾಂಟೀನ್‌ಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಎಷ್ಟು ಜನರು ಆಗಮಿಸುತ್ತಾರೆ, ಎಷ್ಟು ಜನರು ಟೋಕನ್‌ ಪಡೆಯುತ್ತಾರೆ ಎನ್ನುವ ಮಾಹಿತಿ ನಿಖರವಾಗಿ ತಿಳಿಯುತ್ತಿಲ್ಲ. ಆದರೆ ಆನ್‌ಲೈನ್‌ ಸೇವೆಯಿಂದ ಪ್ರತಿ ಕ್ಯಾಂಟೀನ್‌ನಲ್ಲಿ ಯಂತ್ರದ ಮೂಲಕವೇ ವಿತರಿಸಲಾಗುತ್ತದೆ. ಮಷಿನ್‌ನಲ್ಲಿ ಜನತೆಗೆ ಒಂದು ಟೋಕನ್‌ ನೀಡುತ್ತಿದ್ದಂತೆ ಆನ್‌ಲೈನ್‌ನಲ್ಲಿ ಅದರ ಮಾಹಿತಿ ಸಂಗ್ರಹವಾಗುತ್ತದೆ. ರಾಜ್ಯದಲ್ಲಿ ಎಷ್ಟು ಕ್ಯಾಂಟೀನ್‌ನಲ್ಲಿ ಎಷ್ಟು ಜನ ಊಟ, ಉಪಾಹಾರ ಮಾಡಿದರು, ಯಾವ ಊಟ ತಯಾರಿಸಿದ್ದರು, ಕ್ಯಾಂಟೀನ್‌ ಸ್ಥಿತಿಗತಿಯೇನು ಎಂಬ ಮಾಹಿತಿ ದಾಖಲಾಗಲಿದೆ....

ಫೋಟೋ - http://v.duta.us/heqWMQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/eyL5XgAA

📲 Get Karnatakanews on Whatsapp 💬