ಇನ್ನೂ ಆರಂಭಗೊಳ್ಳದ ಹೊರಬಂದರು ನಿರ್ಮಾಣ ಕಾಮಗಾರಿ

  |   Udupinews

ಕುಂದಾಪುರ: ರಾಜ್ಯದ ಮೊದಲ “ಯಾ’ ಶೇಪ್‌ ಮಾದರಿಯ ಮರವಂತೆಯ ಹೊರ ಬಂದರು ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು, ವರ್ಷ ಕಳೆದರೂ, ಇನ್ನೂ ಆರಂಭಗೊಂಡಿಲ್ಲ. ಅರೆಬರೆ ಕಾಮಗಾರಿಯಿಂದಾಗಿ ಸಾಂಪ್ರ ದಾಯಿಕ ಮೀನುಗಾರಿಕೆ ಬಂದರು ಎಂದೇ ಹೆಸರಾದ ಮರವಂತೆಯಲ್ಲಿ ಮೀನುಗಾರಿಕೆಗೆ ಸಮಸ್ಯೆಯಾಗುತ್ತಿದೆ.

ಬಂದರು ಮತ್ತು ಒಳ ನಾಡು ಜಲಸಾರಿಗೆ ಇಲಾಖೆಯ ವತಿ ಯಿಂದ 54 ಕೋ.ರೂ. ವೆಚ್ಚದಲ್ಲಿ ಮರವಂತೆಯಲ್ಲಿ ಕೇರಳ ಮಾದರಿಯ ಹೊರ ಬಂದರು ನಿರ್ಮಾಣ ಕಾಮಗಾರಿ 6 ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಇಲ್ಲಿನ 850 ಮೀ. ಉದ್ದದ ತೀರ ಪ್ರದೇಶದ ಪೈಕಿ ಉತ್ತರ ಭಾಗದಲ್ಲಿ 260 ಮೀ. ಉದ್ದ ಹಾಗೂ ದಕ್ಷಿಣ ಭಾಗದಲ್ಲಿ 355 ಮೀ. ಉದ್ದದ ಬ್ರೇಕ್‌ವಾಟರ್‌ (ಟ್ರೆಟ್ರಾಫೈಡ್‌)ನ ತಡೆಗೋಡೆ ನಿರ್ಮಿಸಿ, ಪ್ರವೇಶದ್ವಾರ ಮಾಡಿ, ಮೀನುಗಾರಿಕೆ ಮುಗಿಸಿ ಬರುವ ದೋಣಿ ಸುಲಭವಾಗಿ ಒಳ ಪ್ರವೇಶಿಸು ವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.

ಮರವಂತೆಯ ಹೊರ ಬಂದರಿನ ತಡೆಗೋಡೆ ನಿರ್ಮಾಣ ಕಾಮಗಾರಿ 2013ರಲ್ಲಿ ಆರಂಭಗೊಂಡಿದ್ದು, 2016 ರಲ್ಲಿ ಮುಗಿಯಬೇಕಿತ್ತು. ಆದರೆ 2019 ಆದರೂ, ಮುಗಿದೇ ಇಲ್ಲ. ತಮಿಳುನಾಡು ಮೂಲದ ಎನ್‌ಎಸ್‌ಕೆ ಬಿಲ್ಡರ್ಸ್‌ ಸಂಸ್ಥೆಗೆ ಈ ಕಾಮಗಾರಿ ವಹಿಸಲಾಗಿದೆ. 54 ಕೋ.ರೂ. ಪೈಕಿ 45 ಕೋ.ರೂ. ಅನುದಾನ ಮಂಜೂರಾಗಿದೆ. 9 ಕೋ.ರೂ. ವೆಚ್ಚದ ಕಾಮಗಾರಿ ಬಾಕಿಯಿದೆ. ಆದರೆ ವಿಳಂಬ ಕಾಮಗಾರಿಯಿಂದಾಗಿ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರಿಂದ ಸ್ಥಗಿತಗೊಂಡಿದೆ ಎನ್ನಲಾಗಿದೆ....

ಫೋಟೋ - http://v.duta.us/YLsMnwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/RUXZRAAA

📲 Get Udupi News on Whatsapp 💬