ಐಹೊಳೆ ಸ್ಥಳಾಂತರ ಬೇಡಿಕೆಗೆ ಮರುಜೀವ

  |   Bagalkotnews

ಅಮೀನಗಡ: ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಪಡೆದ ಐಹೊಳೆ ಸ್ಥಳಾಂತರ ದಶಕಗಳ ಬೇಡಿಕೆ ಮಲಪ್ರಭಾ ನದಿಯ ಭೀಕರ ಪ್ರವಾಹ ಬಂದ ಹೋದ ಮೇಲೆ ಚಾಲನೆ ಪಡೆದುಕೊಂಡಿದೆ.

ಇತ್ತೀಚಿಗೆ ಬಂದು ಹೋದ ಭೀಕರ ಪ್ರವಾಹದಿಂದ ಐಹೊಳೆ ಗ್ರಾಮಕ್ಕೆ ಪ್ರವಾಹ ನೀರು ಬಂದಿರುವುದರಿಂದ ಐತಿಹಾಸಿಕ ದೇವಾಲಗಳು ಸೇರಿದಂತೆ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ನೂರಾರು ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಭವಿಷ್ಯದ ದೃಷ್ಟಿಯಿಂದ ಸ್ಥಳಾಂತರವಾಗುವುದೇ ಉತ್ತಮ ಎಂಬ ಲೆಕ್ಕಾಚಾರದಲ್ಲಿ ಸಾರ್ವಜನಿಕರಿದ್ದು, ಐಹೊಳೆ ಸ್ಥಳಾಂತರಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬಂದಿದೆ.

ಕನಸಾಗೇ ಉಳಿದ ಸ್ಥಳಾಂತರ: ದೇಶದಲ್ಲೇ ಹಿಂದೂ ದೇವಾಲಯ ನಿರ್ಮಾಣ ಪ್ರಯೋಗ ಶಾಲೆಯೆಂದು ಖ್ಯಾತಿಯಾಗಿರುವ ಐಹೊಳೆ ಗ್ರಾಮದ ಸ್ಥಳಾಂತರ 30 ವರ್ಷದ ಬೇಡಿಕೆ. ಈ ಹಿಂದೆ 2006ರಲ್ಲಿ 9 ದೇವಾಲಯಗಳ ಸಂಕೀರ್ಣಗಳ ಸುತ್ತಲಿನ 144 ಆಸ್ತಿಗಳ (ಮನಗೆಳು) ಸ್ಥಳಾಂತರಕ್ಕೆ ಪಟ್ಟಿ ಮಾಡಲಾಗಿತ್ತು. ಆದರೆ ಇಡೀ ಗ್ರಾಮವನ್ನೇ ಸ್ಥಳಾಂತರಿಸುವಂತೆ ಗ್ರಾಮಸ್ಥರಿಂದ ಕೂಗು ಆರಂಭಗೊಂಡಿತು. ಅಲ್ಲಿಂದ ಸ್ಥಳಾಂತರಿಸುವುದರ ಕುರಿತು ಚರ್ಚೆಗಳು ಜೋರಾಗಿ ಆರಂಭಗೊಂಡವು. ನಂತರ 2013ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಐಹೊಳೆ ಗ್ರಾಮದ ಅಳಿಯ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ ಸ್ಥಳಾಂತರಿಸಲು ಮುಂದಾಗಿದ್ದರು. ಅಷ್ಟೆ ಅಲ್ಲ ಅಡಿಗಲ್ಲು ಸಮಾರಂಭ ಕೂಡ ನಡೆದಿತ್ತು. ಸ್ಥಳಾಂತರಕ್ಕೆ ಅವಶ್ಯವಿದ್ದ 252 ಎಕರೆ ಜಮೀನು ಗುರುತಿಸಲಾಗಿತ್ತು....

ಫೋಟೋ - http://v.duta.us/Aa_8IAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/zD1qUQAA

📲 Get Bagalkot News on Whatsapp 💬