ಕಾಮಗಾರಿಗಳಿಂದ ಸಮಸ್ಯೆ ಸೃಷಿ

  |   Tumkurnews

ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಂದ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದರಿಂದ ನಾಗರಿಕರಿಗೆ ತೀವ್ರ ಸಮಸ್ಯೆಗಳು ಎದುರಾಗುತ್ತಿವೆ ಎಂದು 15ನೇ ವಾರ್ಡ್‌ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್‌ ಆರೋಪಿಸಿದರು.

ನಗರದಲ್ಲಿ ಮಾಡಲಾಗುತ್ತಿರುವ ಗ್ಯಾಸ್‌ ಲೈನ್‌, 24 ಗಂಟೆಗಳ ಕುಡಿಯುವ ನೀರಿನ ಯೋಜನೆ ಹಾಗೂ ಯುಟಿಲಿಟಿ ಚೇಂಬರ್‌ ಗಳ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಇದರಿಂದ ಸ್ಥಳೀಯ ನಾಗರಿಕರಿಗೆ ತೊಂದರೆ ಗಳಾಗುತ್ತಿವೆ. ಚೇಂಬರ್‌ಗಳಿಗೆ ತೆಗೆದ ಹಳ್ಳಗಳಲ್ಲಿ ಮಣ್ಣು ಕುಸಿಯುತ್ತಿದ್ದು, ಇದರಿಂದ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಕಾರು, ದ್ವಿಚಕ್ರ ವಾಹನಗಳು ಹಳ್ಳಗಳಲ್ಲಿ ಕುಸಿಯುತ್ತಿವೆ. ಈಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಕಾರ್ಯಾದೇಶ ಪತ್ರ ನೀಡಲಾಗುತ್ತದೆ. ಅದರಲ್ಲಿ ನಿರ್ದಿಷ್ಟ ಸಮಯ ನಿಗದಿ ಮಾಡಿರುತ್ತಾರೆ. ಆದರೆ ಇಲ್ಲಿ ಯಾವುದೇ ಕಾರ್ಯಾದೇಶ ಪತ್ರ ತೋರಿಸದೆ, ಕೆಲಸವೂ ಸಂಪೂರ್ಣವಾಗಿ ಮಾಡದೆ ಅರ್ಧಂಬರ್ದ ಮಾಡಿ ಬಿಡುತ್ತಿದ್ದಾರೆ. ಕಾನೂನು ಪ್ರಕಾರ ಯಾವುದೇ ಕಾಮಗಾರಿ ಮಾಡಿದ ನಂತರ ಅದನ್ನು ಯಥಾಸ್ಥಿತಿ ಮಾಡಬೇಕು ಎಂದು ಇದೆ. ಆದರೆ ಇಲ್ಲಿ ಮಾಡುತ್ತಿರುವ ಕಾಮಗಾರಿಗಳಿಂದ ನಿತ್ಯ ನರಕ ಅನುಭಸು ವಂತಾ ಗಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ....

ಫೋಟೋ - http://v.duta.us/MJUjvgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/blJHkwAA

📲 Get Tumkur News on Whatsapp 💬