ಕಾರಂತ ಕಾಲೇಜು ರಂಗೋತ್ಸವ ನಾಳೆಯಿಂದ

  |   Mysorenews

ಮೈಸೂರು: ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುವ ದೃಷ್ಟಿಯಿಂದ ಸೆ.24ರಿಂದ ಅ.5ರವರೆಗೆ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ 6.30ಕ್ಕೆ ಭೂಮಿಗೀತದಲ್ಲಿ ನಾಟಕ ಪ್ರದರ್ಶನ ಇರಲಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಪತ್ರಿ ವರ್ಷದಂತೆ ಈ ಬಾರಿಯೂ ರಂಗಾಯಣದ ವತಿಯಿಂದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಮೈಸೂರಿನ ಜತೆಗೆ ಮಂಡ್ಯ, ಮಳವಳ್ಳಿ, ಕೆ.ಆರ್‌.ಪೇಟೆ, ತಿ. ನರಸೀಪುರ, ಹುಣಸೂರು, ಕೊಡಗು ಸೇರಿದಂತೆ 9 ಕಾಲೇಜು ತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸಲಿವೆ. ಪಾಟ್ನಾದ ಹಿರಿಯ ರಂಗ ನಿರ್ದೇಶಕ ಸಂಜಯ್‌ ಉಪಾಧ್ಯಾಯ ನಾಟಕೋತ್ಸವ ಉದ್ಘಾಟಿಸಿದ್ದಾರೆ ಎಂದು ರಂಗಾಯಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.24ರಂದು ಭೂಮಿಗೀತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ, ಮಳವಳ್ಳಿ ಶಾಂತಿ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ನಾಗರಾಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ರಂಗ ನಿರ್ದೇಶಕ ಚಿದಂಬರ ರಾವ್‌ ಜಂಬೆ ಅಧ್ಯಕ್ಷತೆ ವಹಿಸಿದ್ದಾರೆ. ಈ ಬಾರಿ 9 ಕಾಲೇಜುಗಳು ರಂಗೋತ್ಸವಕ್ಕೆ ಆಯ್ಕೆಯಾಗಿದ್ದು, ಮೈಸೂರು ನಗರದ ಮೂರು ಕಾಲೇಜು ಆಯ್ಕೆಯಾಗಿವೆ. ಮಂಡ್ಯ, ಕೊಡಗು ಭಾಗದಿಂದ ಉಳಿದ ತಂಡಗಳು ಆಯ್ಕೆಯಾಗಿವೆ. ಪ್ರತಿ ತಂಡಕ್ಕೆ ಇಬ್ಬರು ನಿರ್ದೇಶಕರನ್ನು ನೇಮಿಸಲಾಗಿದೆ. ಅವರ ವೆಚ್ಚವನ್ನು ಮತ್ತು ನಾಟಕ ಪರಿಕರಗಳ ವೆಚ್ಚವನ್ನು ರಂಗಾಯಣ ಭರಿಸುತ್ತದೆ ಎಂದು ಹೇಳಿದರು....

ಫೋಟೋ - http://v.duta.us/rz888QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/X8h57QAA

📲 Get Mysore News on Whatsapp 💬