ಕ್ರಿಯಾಶೀಲ ಶಿಕ್ಷಕನಿಂದ ಗಟ್ಟಿ ಸಮಾಜ

  |   Bidarnews

ಬಸವಕಲ್ಯಾಣ: ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಹಾಗೂ ಬೋಧನೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಬೋಧನೆ ಸರಳವಾಗುತ್ತದೆ ಎಂದು ಹಿರನಾಗಾಂವ ಶ್ರೀ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹಿರನಾಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳ ಕಿರು ಹೊತ್ತಿಗೆ ಮತ್ತು ಸಿಡಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕಾಗಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಬಾಳೇಶ ಹತ್ತರಕಿ ಹಾಗೂ “ಜ್ಞಾನ ಸಿಂಚನ’ ಹಾಗೂ “ಜ್ಞಾನ ಕಲ್ಯಾಣ’ “ಸಾಧನೆಯ ಮೆಟ್ಟಲುಗಳು’ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ವರ್ಗಕೋಣೆ ಕೈಪಿಡಿ ರಚಿಸಿ ಅದರ ಜೊತೆಗೆ ತಂತ್ರಜ್ಞಾನ ಆಧಾರಿತ ಸ್ಲೆ„ಡ್‌ ಶೋ ವಿಡಿಯೋಗಳು ಮತ್ತು ಪಿಪಿಟಿಗಳು ಫೈಲ್‌ಗ‌ಳನ್ನು ಸಿಡಿ ಮೂಲಕ ರಚಿಸಿ ಮಕ್ಕಳು ಪರೀಕ್ಷೆಗಳನ್ನು ಸರಳವಾಗಿ ಎದುರಿಸುವಂತೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿ ಕಾರಿ ಸಿ.ಜಿ. ಹಳ್ಳದ ಮಾತನಾಡಿ, ಇಬ್ಬರ ಶಿಕ್ಷಕರ ಕಾರ್ಯ ಶ್ಲಾಘನೀಯವಾದದ್ದು. ಇವರು ರಚಿಸಿದ ಪುಸ್ತಕಗಳನ್ನು ಇಡೀ ತಾಲೂಕಿನ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು. ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಬಾಳೇಶ ಹತ್ತರಕಿ, ಬಸವರಾಜ ಮಾನೋಳೆ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು....

ಫೋಟೋ - http://v.duta.us/ce-DDgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/cKOWFQAA

📲 Get Bidar News on Whatsapp 💬