ಚಿತ್ತಾಪುರ ತಾಪಂ ಸಭಾಂಗಣದಲ್ಲಿ ಬಿಸಿಯೂಟದ್ದೇ ಚರ್ಚೆ

  |   Kalburaginews

ಚಿತ್ತಾಪುರ: ಬಿಸಿಯೂಟ ಅಧಿಕಾರಿಗಳು ಯಾವುದೇ ಶಾಲೆಗಳಿಗೆ ಭೇಟಿ ನೀಡೋದಿಲ್ಲ. ಅನೇಕ ಶಾಲೆಗಳಲ್ಲಿ ಬಿಸಿಯೂಟ ಸಮಸ್ಯೆ ತಾಂಡವಾಡುತ್ತಿವೆ. ಈ ಅವ್ಯವಸ್ಥೆ ಕುರಿತು ತಿಳಿಸಬೇಕು ಎಂದರೆ ಬಿಸಿಯೂಟ ಅಧಿಕಾರಿಗಳು ಕೈಗೆ ಸಿಗೋದಿಲ್ಲ ಎಂದು ತಾಪಂ ಸದಸ್ಯರಾದ ರಾಮು ರಾಠೊಡ, ಸುಧಿಧೀರ ಬೆಳ್ಳಪ್ಪ ತರಾಟೆಗೆ ತೆಗೆದುಕೊಂಡರು.

ತಾಪಂ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಅನೇಕ ಶಾಲೆಗಳಲ್ಲಿ ಬಿಸಿಯೂಟ ನೀಡಲ್ಲ. ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 150 ಇದ್ದರೆ ಅಲ್ಲಿ ಇರೋದು ಮಾತ್ರ 100 ಅಥವಾ 110 ಇರುತ್ತದೆ. ಆದರೆ 150 ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಬಿಸಿಯೂಟದ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೆಲವು ಶಾಲೆಗಳಲ್ಲಿ ಬಿಸಿಯೂಟ ನೀಡುತ್ತಾರೆ. ಆದರೆ ಅದರಲ್ಲಿ ಬೇಳೆ, ಎಣ್ಣೆ ಇರುವುದಿಲ್ಲ. ಬಿಸಿಯೂಟ ಬೇಸಿಗೆ ರಜೆಯಲ್ಲಿಯೂ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದರೂ ನೀಡಿಲ್ಲ. ಹೀಗಾಗಿ ಮಕ್ಕಳಿಗೆ ಬಿಸಿಯೂಟದ ಲಾಭ ಸಿಗದಂತೆ ಆಗಿದೆ. ತಾಲೂಕಿನಲ್ಲಿ ಯೋಜನೆ ಹಳ್ಳಹಿಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಮಾತನಾಡಿ, ಬಿಸಿಯೂಟದ ಅಧಿಕಾರಿ ಯಾವ ಶಾಲೆಗೆ ಭೇಟಿ ನೀಡಿದ್ದಾರೆ? ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದಾರಾ? ಇಲ್ಲಿಯವರೆಗೆ ಸರಿಯಾಗಿ ಬಿಸಿಯೂಟ ನೀಡದ ಶಾಲೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರಿ ಎನ್ನುವ ಕುರಿತು ಮಾಹಿತಿ ನೀಡಿ ಎಂದು ಸೂಚಿಸಿದರು. ಬಿಆರ್‌ಸಿ ಮತ್ತು ಸಿಆರ್‌ಸಿಗಳು ಶಾಲೆಗಳಿಗೆ ಭೇಟಿಯೇ ನೀಡಲ್ಲ. ತಿಂಗಳಿಗೆ ಇಂತಿಷ್ಟು ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದಿದೆ. ಈ ಕುರಿತು ಕ್ರಮ ಕೈಗೊಂಡಿದ್ದಿರಾ ಎಂದು ಸದಸ್ಯರಾದ ರವಿ ಪಡ್ಲ, ರಾಮು ರಾಠೊಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಹರಿಹಾಯ್ದರು....

ಫೋಟೋ - http://v.duta.us/Wvny6wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/YAjwzwAA

📲 Get Kalburagi News on Whatsapp 💬