ಜಲಮೂಲ ರಕ್ಷಿಸುವ ಮೂಲಕ ಜೀವ ಸಂಕುಲ ಉಳಿಸಿ

  |   Kolar-Karnatakanews

ಮಾಲೂರು: ನಮ್ಮ ಪೂರ್ವಜರು ನಿರ್ಮಿಸಿರುವ ಕೆರೆ, ಕುಂಟೆ, ರಾಜಕಾಲುವೆ, ಗುಂಡುತೋಪುಗಳನ್ನು ಸಂರಕ್ಷಿಸಿ, ಸಸಿ ನೆಟ್ಟು ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ನೀರು ಉಳಿಸುವಂತೆ ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಡಿ.ಅನುಪಮಾ ತಿಳಿಸಿದರು.

ತಾಲೂಕಿನ ಜಯಮಂಗಲ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಅರಣ್ಯ, ಪೊಲೀಸ್‌ ಇಲಾಖೆ, ಗ್ರಾಪಂ, ಪರಿವಾರ ಫೌಂಡೇಷನ್‌ ಹಾಗೂ ಕ್ರೈಸ್ಟ್‌ ಕಾಲೇಜಿನಿಂದ ಹಮ್ಮಿಕೊಂಡಿದ್ದ 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೀವನದಲ್ಲಿ ಅಳವಡಿಸಿಕೊಳ್ಳಿ: ಪ್ರತಿಯೊಬ್ಬರೂ ತಮ್ಮ ಮನೆ ಅಂಗಳದಲ್ಲಿ 2 ಮರ ಬೆಳೆಸಿ ನೀರನ್ನು ವ್ಯರ್ಥ ಮಾಡದೇ, ಮಿತವಾಗಿ ಬಳಕೆ ಮಾಡಿ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಿ. ಸಂರಕ್ಷಿಸಿದ ನೀರನ್ನು ಬಳಕೆ ಮಾಡಿ, ಅಂತರ್ಜಲ ಪುನಶ್ಚೇತನ ಮಾಡಿಕೊಳ್ಳಿ, ಪ್ಲಾಸ್ಟಿಕ್‌ಅನ್ನು ಬಳಸದೆ ಆರೋಗ್ಯಕ್ಕೆ ಅನುಕೂಲಕರವಾದ ಪದ್ಧತಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಿರ್ಲಕ್ಷ್ಯ ಮಾಡ್ತಾರೆ: ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತಿರುಗಿ ಬಿದ್ದಿಲ್ಲ ಎಂದರೇ ಮಜಾ ಮಾಡಿಕೊಂಡು ಕಾಲಹರಣ ಮಾಡುತ್ತ, ಜನರ ಕೆಲಸಗಳು ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ ಎಂದು ಹೇಳಿದರು....

ಫೋಟೋ - http://v.duta.us/0-pAoQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/0T_YsgAA

📲 Get Kolar Karnataka News on Whatsapp 💬