ಡಾಮರೇ ಕಾಣದ ಮಲ್ಲಾರ್‌-ಮುಗ್ಗೇರ್ಕಳ- ಚೌಕಿ ಸಂಪರ್ಕ ರಸ್ತೆ !

  |   Udupinews

ಬಜಗೋಳಿ (ಪಳ್ಳಿ ): ಮಾಳ ಗ್ರಾ.ಪಂ. ವ್ಯಾಪ್ತಿಯ ಮಲ್ಲಾರ್‌ ಮುಗ್ಗೇರ್ಕಳ -ಚೌಕಿ ಸಂಪರ್ಕ ರಸ್ತೆಯು ಡಾಮರು ಕಾಣದೇ ಸಂಚಾರ ದುಸ್ತರವಾಗಿದೆ. ಸುಮಾರು 4.5 ಕಿ.ಮೀ. ಉದ್ದದ ಈ ರಸ್ತೆಯ ಪ್ರಾರಂಭದಲ್ಲಿ 100 ಮೀ. ಕಾಂಕ್ರೀಟಿಕರಣಗೊಂಡಿದ್ದರೂ ಉಳಿದದ್ದು ಕಚ್ಚಾ ರಸ್ತೆ.

ಮಾಳ, ಮಲ್ಲಾರ್‌ ಹಾಗೂ ಚೌಕಿ ಪ್ರದೇಶಗಳಿಗೆ ತೆರಳಲು ಸ್ಥಳೀಯರು ಈ ರಸ್ತೆಯನ್ನೇ ಅವಲಂಭಿಸಿದ್ದು, ರಸ್ತೆ ಹೊಂಡಗುಂಡಿಗಳಿಂದ ಕೂಡಿರುವ ಕಾರಣ ಸಂಚಾರ ಬಲು ಕಷ್ಟಕರ ಎಂಬುದು ಸ್ಥಳೀಯರ ಅಳಲು.

ಬಾಡಿಗೆ ವಾಹನಗಳೂ ಬರುತ್ತಿಲ್ಲ!

ಈ ಪರಿಸರದಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಮನೆಗಳು ಸೇರಿ ಸುಮಾರು 100ಕ್ಕೂ ಅಧಿಕ ಮನೆಗಳಿವೆ. ಕನೆಗುಂಡಿ, ಮುಗ್ಗೇರ್ಕಲ, ಸುಂಕದಕಟ್ಟೆ ಅಸುಪಾಸಿನ ಸ್ಥಳೀಯರು ದಿನ ನಿತ್ಯದ ವ್ಯವಹಾರಕ್ಕೆ ಈ ರಸ್ತೆ ಅತ್ಯಗತ್ಯ. ಆದರೆ ರಸ್ತೆಯ ದುರಾವಸ್ಥೆಯಿಂದಾಗಿ ಬಾಡಿಗೆ ವಾಹನಗಳೂ ಬರಲು ಹಿಂದೇಟುಹಾಕುತ್ತಿವೆ. ಪಡಿತರ ಕೇಂದ್ರ, ಗ್ರಾ.ಪಂ. ಕಚೇರಿ ಹಾಗೂ ಪ್ರಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕೆಂದರೂ ಈ ರಸ್ತೆಯ ಮೂಲಕವೇ ತೆರಳಬೇಕು. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಗ್ರಾಮಸ್ಥರು ಹರಸಾಹಸ ಪಡಬೇಕು ಎಂಬುದು ಗ್ರಾಮಸ್ಥರ ಆರೋಪ....

ಫೋಟೋ - http://v.duta.us/wtPQwgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/XiLlLAEA

📲 Get Udupi News on Whatsapp 💬