ದೇಶ ಭಕ್ತಿಯಷ್ಟೇ ಜ್ಞಾನವೂ ಮುಖ್ಯ

  |   Karnatakanews

ಬೆಂಗಳೂರು: ದೇಶಭಕ್ತಿ ಇದ್ದರೆ ಸಾಲದು, ದೇಶದ ಬಗ್ಗೆ ಜ್ಞಾನವೂ ಇರಬೇಕು ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಗಿರಿನಗರದ ರಾಮಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ “ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ವಿಶ್ವವಿದ್ಯಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಜ್ಞಾನದಿಂದ ಕೂಡಿದ ದೇಶಭಕ್ತಿಯಿಂದ ಫ‌ಲ ಸಿಗುವುದಿಲ್ಲ.

ದೇಶಭಕ್ತಿ ಮತ್ತು ಜ್ಞಾನ, ತಿಳಿವಳಿಕೆಯ ಸಮಾಗಮವಾಗಬೇಕು. ಉತ್ತರ ಕನ್ನಡದ ಗೋಕರ್ಣದಲ್ಲಿರುವ ಆಶೋಕವನದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸರ್ಕಾರದ ಮುಂದೆ ಭಿಕ್ಷಾ ಪಾತ್ರೆ ಹಿಡಿದುಕೊಳ್ಳುವ ಬದಲು, ಸಮಾಜದಿಂದಲೇ ನೆರವು ಪಡೆದುಕೊಳ್ಳಲಾಗುತ್ತಿದ್ದು, ಇದಕ್ಕೆ ಸಮಾಜದ ಹಲವು ಗಣ್ಯರು ತಮ್ಮ ಧನ, ಮನ ತ್ಯಾಗ ಮಾಡಿದ್ದಾರೆಂದು ಸ್ವಾಮೀಜಿ ಹೇಳಿದರು.

ವಿಷ್ಣು ಗುಪ್ತ ವಿಶ್ವವಿದ್ಯಾಪೀಠದಲ್ಲಿ ವೇದಗಳು, ಇತಿಹಾಸ ಪುರಾಣಗಳು, ದರ್ಶನಗಳು, ವೇದ ಹಾಗೂ ಉಪವೇದ, ವೇದಾಂಗಗಳು, ಪೂರ್ವಪರ ಪ್ರಯೋಗ, ವೇದಭಾಷ್ಯಾ, ಶೌತ್ರ, ಧರ್ಮಶಾಸ್ತ್ರ, ಆಗಮ ಹಾಗೂ ಬ್ರಹ್ಮರ್ಷಿ ದೈವಾವತಾರ ಕೃತಿಗಳು, ಗೋರಕ್ಷೆ, ಅಷ್ಟಾಂಗ ಯೋಗ, ಕೃಷಿ, ವಾಣಿಜ್ಯ ಮತ್ತು ಧರ್ಮಶಾಸ್ತ್ರ ಸೇರಿ ಹಲವು ವಿಷಯಗಳ ಬಗ್ಗೆ ತಿಳಿಸಲಾಗುವುದು. ಪೀಠದಲ್ಲಿ ಜ್ಞಾನಕ್ಕೆ ಮತ್ತು ನಿಷ್ಠೆಗೆ ಆದ್ಯತೆ ನೀಡಲಾಗುವುದು ಎಂದು ಸ್ವಾಮೀಜಿ ಹೇಳಿದರು.

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/uAsj4gAA

📲 Get Karnatakanews on Whatsapp 💬