ನೀರಿನ ಬಿಲ್‌ ಬಾಕಿ: ಪಟ್ಟಿ ನೀಡಲು 10 ದಿನಗಳ ಗಡುವು

  |   Dakshina-Kannadanews

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್‌ ಪಾವತಿಯಾಗಲು ಬಾಕಿಯಿದ್ದು, ಬಿಲ್‌ ಪಾವತಿ ಮಾಡದವರ ಸಂಪೂರ್ಣ ಪಟ್ಟಿಯನ್ನು ನೀಡಲು ಬಿಲ್‌ ವಸೂಲಿ ಗಾರರು ವಿಫ‌ಲರಾಗಿದ್ದು, ಈ ಹಿನ್ನೆಲೆ ಯಲ್ಲಿ ಮೂರನೇ ಬಾರಿ ಅವಕಾಶ ನೀಡಿ 10 ದಿನಗಳ ಅಂತಿಮ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಗ್ರಾ.ಪಂ. ಅಧ್ಯಕ್ಷೆ ರತಿ ಎಸ್‌. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್‌ ಪಾವತಿಯಾಗಲು ಬಾಕಿಯಿದ್ದು, ಬಿಲ್‌ ವಸೂಲಿಗಾರರ ಪಟ್ಟಿಗೂ ಕಡತ ಪುಸ್ತಕದಲ್ಲಿ ದಾಖಲಾಗಿರುವ ಮೊತ್ತಕ್ಕೂ ತಾಳೆಯಾಗುತ್ತಿಲ್ಲ ಎಂದು ಗ್ರಾ.ಪಂ. ಪಿಡಿಒ ಜಯಪ್ರಕಾಶ್‌ ಕಳೆದ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು. ಈ ಸಂದರ್ಭ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು ಬಳಕೆದಾರರ ಎಷ್ಟು ಹಣ ಪಾವತಿಗೆ ಬಾಕಿ ಇದೆ ಎಂಬುದನ್ನು ವಿವರವಾಗಿ ಪಟ್ಟಿ ಮಾಡಿ ಏಳು ದಿನಗಳೊಳಗೆ ಒಪ್ಪಿಸುವಂತೆ ಗ್ರಾ.ಪಂ. ಸದಸ್ಯರು ಬಿಲ್‌ ವಸೂಲಿಗಾರರಿಗೆ ಸೂಚಿಸಿದ್ದರು. ಆದರೆ ಏಳು ದಿನವಾದರೂ ಬಿಲ್‌ ವಸೂಲಿಗಾರರು ಲೆಕ್ಕ ಒಪ್ಪಿಸಿರಲಿಲ್ಲ. ಮತ್ತೆ ಒಂದು ವಾರ ಕಾಲಾವಕಾಶ ನೀಡಿ ಸೆ. 21ರಂದು ನೀರಿನ ಬಿಲ್‌ನ ಲೆಕ್ಕಪತ್ರ ಪರಿಶೀಲನ ಸಭೆ ನಡೆಯಲಿದ್ದು, ಲೆಕ್ಕ ಒಪ್ಪಿಸುವಂತೆ ತಿಳಿಸಿದ್ದರು. ಸೆ. 21ರಂದು ನಡೆದ ಸಭೆಯಲ್ಲಿ ಬಿಲ್‌ ವಸೂಲಿಗಾರರು ಅಪೂರ್ಣ ಪಟ್ಟಿಯನ್ನು ನೀಡಿದ್ದಾರೆ....

ಫೋಟೋ - http://v.duta.us/CN7QDQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/jykArwAA

📲 Get Dakshina Kannada News on Whatsapp 💬