ನೆರೆ ಮನೆ ಸಂಕಟ!

  |   Belgaumnews

ಬೆಳಗಾವಿ: ನದಿಗಳು ಶಾಂತವಾಗಿವೆ. ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಮುಳುಗಡೆ ಮತ್ತು ಜಲಾವೃತವಾಗಿದ್ದ ಯಾವ ಗ್ರಾಮದಲ್ಲೂ ಈಗ ಗ್ರಾಮಗಳ ಕಟ್ಟೆಯ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಇಲ್ಲವೇ ಎಲೆ, ಅಡಕೆ ಜಗಿಯುತ್ತ ಕುಳಿತಿರುವ ಜನ ಕಾಣುವುದಿಲ್ಲ.

ಬಿದ್ದ ಮನೆಗಳನ್ನು ಸರಿಪಡಿಸಿಕೊಳ್ಳುವವರು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಪಾತ್ರೆ, ಬಟ್ಟೆ ಬರೆ, ತಗಡುಗಳನ್ನು ಹುಡುಕಿ ಮೊದಲಿನಂತೆ ಮಾಡುವವರು, ಮಕ್ಕಳನ್ನು ಎಂದಿನಂತೆ ಶಾಲೆಗೆ ತಯಾರು ಮಾಡುವವರು, ನಷ್ಟದ ಅಂದಾಜನ್ನು ಅಂಕಿ-ಅಂಶಗಳ ಸಮೇತ ಸಿದ್ಧಪಡಿಸಲು ತಮ್ಮ ಊರಿಗೆ ಬರುವ ಅಧಿಕಾರಿಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನಷ್ಟದ ದಾಖಲೆಗಳನ್ನು ಫೋಟೋ ಸಮೇತ ಸಿದ್ಧ ಮಾಡಿಕೊಳ್ಳುವವರು ಸಿಗುತ್ತಾರೆ. ಮುಳುಗಡೆ ಹಾಗೂ ಜಲಾವೃತವಾಗಿದ್ದ ಗ್ರಾಮಗಳಲ್ಲಿ ಈಗ ಕೆಲಸ ಮಾಡದವರೇ ಇಲ್ಲ. ಸೋಮಾರಿಗಳಿದ್ದರೂ ಅವರ ಸಂಖ್ಯೆ ಬಹಳ ಕಡಿಮೆ. ಗ್ರಾಮಕ್ಕೆ ಯಾರಾದರೂ ಅಧಿಕಾರಿಗಳು, ಅಪರಿಚಿತರು ಅಥವಾ ಸಂಘ ಸಂಸ್ಥೆಗಳ ಸದಸ್ಯರು ಬಂದರೆ ಸಾಕು ಇಡೀ ಗ್ರಾಮಕ್ಕೆ ಗ್ರಾಮವೇ ಅವರನ್ನು ಮುತ್ತಿಕೊಳ್ಳುತ್ತದೆ. ಆಸೆಗಣ್ಣಿನಿಂದ ಹೊಸ ಆಸರೆಗಾಗಿ ಹಾತೊರೆಯುತ್ತಾರೆ. ಬಂದವರು ಅಲ್ಲಿಂದ ಹೋಗಿದ್ದೇ ತಡ ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವ ಕಾಯಕ ಆರಂಭವಾಗುತ್ತದೆ....

ಫೋಟೋ - http://v.duta.us/FSIHsgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/kct7WgAA

📲 Get Belgaum News on Whatsapp 💬