ಪಡಿತರ ಪಡೆಯದ 41 ಸಾವಿರ ಕಾರ್ಡ್‌ದಾರರು

  |   Karnatakanews

ಬೆಂಗಳೂರು: ರಾಜ್ಯದ ಅಂದಾಜು 2.11 ಕೋಟಿ ಬಿಪಿಎಲ್‌ ಕಾರ್ಡುದಾರರ ಪೈಕಿ 41 ಸಾವಿರ ಫ‌ಲಾನು ಭವಿಗಳು ಕಳೆದ 3 ತಿಂಗಳಿಂದ ಪಡಿತರ ತೆಗೆದುಕೊಂಡಿಲ್ಲ ಅಥವಾ ಹಂಚಿಕೆಯಾಗಿಲ್ಲ. ಹೀಗಾಗಿ ಆಹಾರ ಇಲಾಖೆಗೆ ಹೊಸದೊಂದು ತಲೆನೋವು ಉಂಟಾಗಿದೆ.

ಸಾಲ ಮನ್ನಾ, ಬೆಳೆ ವಿಮೆ, ನಷ್ಟ ಪರಿಹಾರ ಇತ್ಯಾದಿ ಫ‌ಲಾನುಭವಿ ಆಧಾರಿತ ಯೋಜನೆಗಳಿಗೆ ಬಿಪಿಎಲ್‌ ಕಾರ್ಡ್‌ ಪ್ರಮುಖ ದಾಖಲೆಯಾಗಿದೆ. ಕೇವಲ ಯೋಜನೆ ಗಳಿಗಾಗಷ್ಟೇ ಕಾರ್ಡ್‌ ಮಾಡಿಸಿಕೊಂಡಿರಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸು ತ್ತಾರೆ. ಅಥವಾ ಪಡಿತರ ಹಂಚಿಕೆಯಲ್ಲೂ ಸಮಸ್ಯೆ ಇರಬಹುದು ಎಂಬ ಮಾತುಗಳೂ ಕೇಳಿ ಬಂದಿವೆ.

ಬರ ಹಾಗೂ ನೆರೆಪೀಡಿತ ಉಕ ಭಾಗದ ಜಿಲ್ಲೆಗಳಲ್ಲೇ ಪಡಿತರ ತೆಗೆದುಕೊಳ್ಳದ ಕಾರ್ಡ್‌ದಾರರ ಸಂಖ್ಯೆ ಹೆಚ್ಚಿದೆ. ಈ ರೀತಿ 3 ತಿಂಗಳಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಿಪಿಎಲ್‌ ಕಾರ್ಡ್‌ದಾರರು ಪಡಿತರ ಪಡೆದುಕೊಳ್ಳದೇ ಇರು ವುದಕ್ಕೆ ಫ‌ಲಾನುಭವಿ ಆಧರಿತ ಯೋಜನೆಗಳಿಗೆ ಸೀಮಿತ ವಾಗಿ ಕಾರ್ಡ್‌ ಮಾಡಿಸಿಕೊಂಡಿರುವುದರ ಜತೆಗೆ ಬರ ಮತ್ತು ನೆರೆಯೂ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಪ್ರತಿ ತಿಂಗಳ ಪಡಿತರ ವಿತರಣೆ ನಿಗದಿತ ದಿನಾಂಕಗಳಲ್ಲಿ ಒಂದೆರಡು ದಿನ ತಡವಾದರೆ ಜನ ಸಹಿಸಿಕೊಳ್ಳುವುದಿಲ್ಲ. ಅಂಥದ್ದರಲ್ಲಿ ಕಳೆದ 3 ತಿಂಗಳಿಂದ 41 ಸಾವಿರ ಕಾರ್ಡ್‌ದಾರರು ಪಡಿತರ ಅಂಗಡಿಗಳತ್ತ ಸುಳಿದಿಲ್ಲವೇ? ಅಥವಾ ಅಷ್ಟೂ ಮಂದಿಗೆ ಪಡಿತರ ಹಂಚಿಕೆಯಾಗಿಲ್ಲವೇ? ಎಂಬುದು ಇಲಾಖೆಗೆ ಯಕ್ಷಪ್ರಶ್ನೆಯಾಗಿದೆ....

ಫೋಟೋ - http://v.duta.us/YDm-pQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/wcXKLwAA

📲 Get Karnatakanews on Whatsapp 💬