ಪಾಣೆಮಂಗಳೂರು ಪೇಟೆ, ನರಿಕೊಂಬು-ದಾಸಕೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ

  |   Dakshina-Kannadanews

ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡ್‌ – ಮೆಲ್ಕಾರ್‌ – ಮಾಣಿ ಮಧ್ಯೆ ಸಾಕಷ್ಟು ಹೊಂಡಗಳು ಕಾಣಿಸಿಕೊಂಡಿರುವ ಕಾರಣ ಪ್ರಸ್ತುತ ಕೆಲವು ವಾಹನಗಳು ಪಾಣೆ ಮಂಗಳೂರು – ಮೆಲ್ಕಾರ್‌, ನರಿಕೊಂಬು – ದಾಸಕೋಡಿ ರಸ್ತೆಯನ್ನು ಬಳಸುತ್ತಿದ್ದು, ಇದು ಪಾಣೆಮಂಗಳೂರು ಪೇಟೆಯಲ್ಲಿ ಸಂಚಾರ ದಟ್ಟಣೆಗೂ ಕಾರಣ ವಾಗುತ್ತಿದೆ.

ಹೆದ್ದಾರಿಯ ಬಿ.ಸಿ. ರೋಡ್‌-ಮಾಣಿ ಮಧ್ಯೆ ಸಾಕಷ್ಟು ಹೊಂಡಗಳಿದ್ದು, ಹೀಗಾಗಿ ವಾಹನಗಳು ಎದ್ದು ಬಿದ್ದು ಸಾಗಬೇಕಿದ್ದು, ಸ್ಥಳೀಯ ವಾಹನದವರು ಹೊಂಡಗಳನ್ನು ತಪ್ಪಿಸುವ ದೃಷ್ಟಿಯಿಂದ ಪರ್ಯಾಯ ರಸ್ತೆಗಳನ್ನು ಬಳಸುತ್ತಿದ್ದಾರೆ. ಹೊಂಡಗಳಿಗೆ ಪೂರ್ತಿ ಮುಕ್ತಿ ಲಭಿಸುವವರೆಗೆ ವಾಹನ ಚಾಲಕರು/ಸವಾರರು ಇದೇ ರಸ್ತೆಯನ್ನು ಬಳಸುವ ಸಾಧ್ಯತೆ ಇದೆ.

ಪಾಣೆಮಂಗಳೂರು ಪೇಟೆಯಲ್ಲಿ ಸಂಚಾರ

ಬಿ.ಸಿ. ರೋಡ್‌ – ಮೆಲ್ಕಾರ್‌ ಮಧ್ಯೆ ಸಾಗುವವರು ಬಿ.ಸಿ. ರೋಡ್‌ನಿಂದ ಗೂಡಿನಬಳಿ ರಸ್ತೆಯಲ್ಲಿ ಸಾಗಿ ಪಾಣೆ ಮಂಗಳೂರು ಪೇಟೆಯ ಮೂಲಕ ಮೆಲ್ಕಾರ್‌ ಸಾಗುತ್ತಿದ್ದಾರೆ. ಇಲ್ಲಿ ರಸ್ತೆ ಕಿರಿದಾಗಿದ್ದರೂ ಸಂಚಾರಯೋಗ್ಯವಾಗಿರುವುದ ರಿಂದ ಚಾಲಕರು/ಸವಾರರು ತಮ್ಮ ವಾಹನಗಳ ಹಿತದೃಷ್ಟಿಯಿಂದ ಕೊಂಚ ತಡವಾದರೂ ಇದೇ ರಸ್ತೆಯನ್ನು ಬಳಸುತ್ತಾರೆ.ಈ ರೀತಿ ಏಕಕಾಲದಲ್ಲಿ ಹೆಚ್ಚಿನ ವಾಹನ ಗಳು ಸಾಗುವುದರಿಂದ ಪಾಣೆಮಂಗಳೂರು ಪೇಟೆಯಲ್ಲಿ ಕೊಂಚ ಮಟ್ಟಿನ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ. ಈ ಪೇಟೆಯು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಸ್ಥಳೀಯ ವಾಹನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಗುತ್ತಿವೆ....

ಫೋಟೋ - http://v.duta.us/aY8tawAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Gzs4WAAA

📲 Get Dakshina Kannada News on Whatsapp 💬