ಬಡವರಿಗೆ ಯೋಜನೆ ತಲುಪಲಿ

  |   Bijapur-Karnatakanews

ಹೂವಿನಹಿಪ್ಪರಗಿ: ಸರಕಾರ ಸಾಮಾಜಿಕ ಭದ್ರತೆಯಡಿ ಬಡ ಮತ್ತು ನಿರ್ಗತಿಕರ ಕಲ್ಯಾಣಕ್ಕಾಗಿ ಪಿಂಚಣಿ ಯೋಜನೆ ಮೂಲಕ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಸಂಧ್ಯಾ ಸುರಕ್ಷ, ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ, ಮೈತ್ರಿ ಮನಶ್ವಿ‌ನಿ, ಅಂಗವಿಕಲರಿಗೆ ಪ್ರತಿ ತಿಂಗಳು ಪಿಂಚಣಿ ನೀಡುತ್ತಿದ್ದು ಯೋಜನೆ ಲಾಭ ಅರ್ಹ ಫಲಾನುಭವಿಗಳಿಗೆ ಮುಟ್ಟಲಿ ಎಂದು ಬಸವನಬಾಗೇವಾಡಿ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಹೇಳಿದರು.

ಬೂದಿಹಾಳ ಗ್ರಾಮದ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆದ ಪಿಂಚಣಿ ಅದಾಲತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜವಾಗಿ ಯಾರು ಅರ್ಹರು ಇದ್ದೀರಿ ಅಂತವರನ್ನು ಗುರುತಿಸಿ ಕಂದಾಯ ಇಲಾಖೆ ಮುರ್ತುವಜಿ ವಹಿಸಿ ಪ್ರತಿ ಗ್ರಾಮಕ್ಕೆ ಪಿಂಚಣಿ ಅದಾಲತ್‌ ಕಾರ್ಯಕ್ರಮ ಮೂಲಕ ನೇರವಾಗಿ ಪಲಾನುಭವಿಗಳಿಗೆ ಆಯ್ಕೆ ಮಾಡಿ ಸ್ಥಳದಲ್ಲಿ ಆದೇಶ ಪತ್ರ ನೀಡಲಾಗುವುದು ಎಂದರು.

ಈ ಪಿಂಚಣಿಯನ್ನು ಪಡೆಯಲು ಯಾರಿಗೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ, ಅಂತ ಪ್ರಕರಣ ಕಂಡು ಬಂದರೆ ಖುದ್ದಾಗಿ ನಾನೇ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಸಂಧ್ಯಾ ಸುರಕ್ಷ ಯೋಜನೆಯಡಿ 3 ವೃದ್ಧಾಪ್ಯ ಯೋಜನೆಯಡಿ 5 ಮನಸ್ವಿನಿ ಯೋಜನೆಯಡಿ ಎರಡು ನಿರ್ಗತಿಕ ವಿಧವಾ ವೇತನ ನೀಡುವ ಯೋಜನೆಯಡಿ ಮೂರು, ಅಂಗವಿಕಲರಿಗೆ ನಾಲ್ಕು ಫಲನಿಭವಿಗಳಿಗೆ ಸೇರಿದಂತೆ ಒಟ್ಟು 15 ಫಲಾನುಭವಿಗಳಿಗೆ ಸ್ಥಳದಲ್ಲಿ ಪರಿಶೀಲಿಸಿ ಮಂಜೂರಾತಿ ನೀಡಲಾಯಿತು....

ಫೋಟೋ - http://v.duta.us/Cy_QbgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/DXjjWAAA

📲 Get Bijapur Karnataka News on Whatsapp 💬