ಬಸಿರಾ ಎದುರು ಮಂಡಿಯೂರಿದ ಮಮತಾ

  |   Gadagnews

ಗದಗ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ದಸರಾ ಬೆಳಗಾವಿ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಅಂತಾರಾಷ್ಟ್ರೀಯ ಕುಸ್ತಿಪಟು ಮಮತಾ ಕೇಲೋಜಿ ಅವರನ್ನು ತಿಂಗಳಲ್ಲಿ ಸತತ ಎರಡನೇ ಬಾರಿಗೆ ಮಣಿಸುವ ಮೂಲಕ ಆತಿಥೇಯ ಕುಸ್ತಿಪಟು ಬಸಿರಾ ವಕಾರದ ಗಮನ ಸೆಳೆದರು. 57 ಕೆಜಿ ಪುರುಷ ಹಾಗೂ 50 ಕೆಜಿ ಮಹಿಳಾ ವಿಭಾಗದ ಅಂತಿಮ ಪಂದ್ಯಗಳು ರಣರೋಚಕವಾಗಿದ್ದವು. ಮಹಿಳಾ ವಿಭಾಗದ ಅಂತಿಮ ಪಂದ್ಯದಲ್ಲಿ ಕಾರವಾರದ ಅಂತಾರಾಷ್ಟ್ರೀಯ ಕುಸ್ತಿಪಟು ಮಮತಾ ಕೇಲೋಜಿ ಅವರನ್ನು ಗದುಗಿನ ಬಸಿರಾ ವಕಾರದ 8-2 ಅಂಕಗಳೊಂದಿಗೆ ಮಣಿಸಿದರು. 6 ನಿಮಿಷಗಳ ಕಾದಾಟ ಹೆಜ್ಜೆ ಹೆಜ್ಜೆಗೂ ರೋಮಾಂಚನಕಾರಿಯಾಗಿತ್ತು.

ಕಟ್ಟುಮಸ್ತಾದ ದೇಹ ಬೆಳೆಸಿಕೊಂಡಿದ್ದ ಜಟ್ಟಿಗಳು ಪರಸ್ಪರ ಚಿತ್ತು ಮಾಡಲು ಹರಸಾಹಸ ನಡೆಸಿದರು. ಬಸಿರಾ ವಕಾರದ ಅವರು ಲೆಗ್‌ ಅಟ್ಯಾಕ್‌ ಮಾಡಿ ಎರಡು ಅಂಕ ಬಾಚಿಕೊಂಡು ಗೆಲುವಿನ ಹಾದಿ ಹಿಡಿದರು. ಇದಕ್ಕೆ ತಡೆಯೊಡ್ಡಲು ಯತ್ನಿಸಿದ ಮಮತಾ, ಬಸಿರಾ ಅವರನ್ನು ಕಾಲರ್‌ ಸ್ವಿಂಗ್‌ ಮಾಡಿ ಎರಡು ಅಂಕಗಳನ್ನು ಪಡೆಯುವಲ್ಲಿ ಮಾತ್ರ ಸಫಲರಾದರು. ನಿಗದಿತ ಅವಧಿಯುದ್ದಕ್ಕೂ ನಡೆದ ಕಾಳಗದಿಂದಾಗಿ ಹೈವೋಲ್ಟೆಜ್‌ ಪಂದ್ಯವಾಗಿ ಮಾರ್ಪಟ್ಟಿತು. ಅಂತಿಮವಾಗಿ ಬಸಿರಾ ವಕಾರದ ಗೆಲುವಿನ ಕೇಕೆ ಹಾಕಿದರು....

ಫೋಟೋ - http://v.duta.us/ri7mtgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-2Q70wAA

📲 Get Gadag News on Whatsapp 💬