ಮಂಗನ ಕಾಯಿಲೆಗೆ ಮದ್ದೆರೆಯಲು ಸನ್ನಧ್ಧ

  |   Chikkamagalurunews

ಶರತ್‌ ಭದ್ರಾವತಿ

ಶಿವಮೊಗ್ಗ: ಕಳೆದ ವರ್ಷ ಇಡೀ ಮಲೆನಾಡನ್ನೇ ತಲ್ಲಣಗೊಳಿಸಿದ್ದ ಕೆಎಫ್‌ಡಿ ಕಾಯಿಲೆಯನ್ನು (ಮಂಗನ ಕಾಯಿಲೆ) ಹದ್ದುಬಸ್ತಿನಲ್ಲಿಡಲು ಆರೋಗ್ಯ ಇಲಾಖೆ ಸರ್ವಸನ್ನದ್ಧವಾಗಿದೆ. ಈಗಾಗಲೇ ಒಂದು ಹಂತದ ಲಸಿಕಾ

ಕಾರ್ಯ ಮುಗಿದಿದ್ದು, ಎರಡನೇ ಹಂತ ಚಾಲ್ತಿಯಲ್ಲಿದೆ. ನವೆಂಬರ್‌ ವೇಳೆಗೆ ಜನರಲ್ಲಿ ಕೆಎಫ್‌ಡಿ ವಿರುದ್ಧ

ಹೋರಾಡುವ ಶಕ್ತಿ ತರಲು ಆರೋಗ್ಯ ಉಲಾಖೆ ಹಗಲಿರುಳು ಕೆಲಸ ಮಾಡುತ್ತಿದೆ.

ಜೂನ್‌ನಿಂದ ಪ್ರತಿ ತಿಂಗಳು 75 ಸಾವಿರ ಲಸಿಕೆಗಳನ್ನು ತರಿಸಿಕೊಳ್ಳಲಾಗುತ್ತಿದ್ದು ಡಿಸೆಂಬರ್‌ ವರೆಗೆ ಒಟ್ಟು 5.25 ಲಕ್ಷ ಲಸಿಕೆ ತರಿಸಿಕೊಳ್ಳಲು ಇಂಡೆಂಟ್‌ ಹಾಕಲಾಗಿದೆ. 2.40 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿಯಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿ ಕ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 70-75 ಸಾವಿರ ಬಾಟಲ್‌ ಡಿಎಂಪಿ ತೈಲ ದಾಸ್ತಾನು ಇದೆ. ಪ್ರತಿ ತಾಲೂಕಿಗೆ ನಾಲ್ಕೈದು ಸಾವಿರ ಬಾಟಲ್‌ಗ‌ಳನ್ನು ನೀಡಲಾಗಿದೆ. ಜಿಲ್ಲೆಗೆ ಎರಡು ಲಕ್ಷ ಬಾಟಲ್‌ಗ‌ಳ ಅಗತ್ಯವಿದ್ದು, ಇನ್ನಷ್ಟು ಡಿಎಂಪಿ ತೈಲದ ಬಾಟಲ್‌ ಗಳನ್ನು ಕಳುಹಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನೊಂದು ತಿಂಗಳಲ್ಲಿ 1 ಲಕ್ಷ ಬಾಟಲ್‌ಗ‌ಳು ಬರುವ ನಿರೀಕ್ಷೆ ಇದೆ. ಹೀಗಾಗಿ, ತೈಲಕ್ಕೆ ಯಾವುದೇ ಕೊರತೆ ಇಲ್ಲ. ಜತೆಗೆ, ಅಗತ್ಯ ಡ್ರಗ್‌ ಗಳೂ ಲಭ್ಯ ಇವೆ. ಒಂದು ವೇಳೆ, ಕೊರತೆ ಎದುರಾದಲ್ಲಿ ಮಾಹಿತಿ ನೀಡುವಂತೆ ಪಿಎಚ್‌ಸಿಗಳಿಗೆ ಮಾಹಿತಿ ರವಾನಿಸಲಾಗಿದೆ....

ಫೋಟೋ - http://v.duta.us/_q92rgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/9gkUDwAA

📲 Get Chikkamagaluru News on Whatsapp 💬