ಮಾಡದ ತಪ್ಪಿಗೆ ನೋವುಂಡ ಸಿದ್ದು

  |   Bangalore-Citynews

ಬೆಂಗಳೂರು: ಸಾಕಷ್ಟು ಉತ್ತಮ ಕೆಲಸಗಳ ನಡುವೆಯೂ ತಾವು ಮಾಡದ ತಪ್ಪಿಗೆ ಇಂದಿಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋವು ಅನುಭವಿಸುತ್ತಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜನಮನ ಪ್ರಕಾಶನ ಭಾನುವಾರ ಆಯೋಜಿಸಿದ್ದ “ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ, ವರ್ತಮಾನದ ಇತಿಹಾಸ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೈಗೆ ಬಂದ ಮಗ ಸಿದ್ದರಾಮಯ್ಯ ಅವರ ಕಣ್ಮುಂದೆ ಸಾವಿಗೀಡಾದ. ಉತ್ತಮ ಕೆಲಸಗಳನ್ನು ಮಾಡಿಯೂ ಕ್ಷೇತ್ರದಲ್ಲಿ ಸೋಲು ಕಂಡು ನೋವು ಅನುಭವಿಸಿದ್ದಾರೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸಿ ಜನಪರ ಯೋಜನೆ ನೀಡಿದರೂ ಪಕ್ಷದಲ್ಲಾದ ಒಳಜಗಳದಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಯಿತು. ಇನ್ನು ಅನರ್ಹಗೊಂಡ ಶಾಸಕರಿಂದ ಸಾಕಿದ ಗಿಣಿಯೇ ಕುಕ್ಕಿದಂತಾಗಿದೆ. ಈ ರೀತಿ ತಾವು ಮಾಡದ ತಪ್ಪಿಗೆ ಸಿದ್ದರಾಮಯ್ಯ ನೋವು ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರು ತುಂಬಾ ಮುಖ್ಯ. ಆದರೆ, ನಮ್ಮದು ಜನರ ಪಕ್ಷವಾಗಿದ್ದು, ಕಾರ್ಯಕರ್ತರೇ ಇಲ್ಲ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬೆಳೆಸಿದ್ದರು. ಈಗ ಅಂತಹ ಪದ್ಧತಿ ಮರೆಯಾಗಿದೆ. ದೇವರಾಜ ಅರಸು ಬಂದ ಬಳಿಕ ಭ್ರಷ್ಟಾಚಾರ ಜಾಸ್ತಿ ಆಯ್ತು ಎಂದು ಕೆಲವರು ಹೇಳಿದರು. ಕಾರಣ ಅವರನ್ನ ಸಮರ್ಥಿಸಿಕೊಳ್ಳುವವರು ಯಾರೂ ಇರಲಿಲ್ಲ. ಅದೇ ಸ್ಥಿತಿ ಸಿದ್ದರಾಮಯ್ಯ ಅವರಿಗೂ ಬಂದಿದೆ. ಇವರಿಗಿಂತ ಮೊದಲು ಬಂದವರು ಬಹಳ ಹಣ ತಿಂದರು. ಆದರೆ, ಅವರನ್ನು ಸಮರ್ಥಿಸಿಕೊಳ್ಳುವವರು ಹೆಚ್ಚಿದ್ದರು ಎಂದರು....

ಫೋಟೋ - http://v.duta.us/7KuCMQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GraFagAA

📲 Get Bangalore City News on Whatsapp 💬