ಮೂರು ದಶಕದ ಕನಸು ಮೂರು ದಶಕದ ಕನಸು ಶೀಘ್ರ ನನಸು?

  |   Chitradurganews

ತಿಪ್ಪೇಸ್ವಾಮಿ ನಾಕೀಕೆರೆ

ಚಿತ್ರದುರ್ಗ: ಮೂರು ದಶಕಗಳ ಹೋರಾಟ, ಅನುಭವಿಸಿದ ಬವಣೆಗೆ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಕೊಂಚ ಸಮಾಧಾನ ಸಿಗುವ ಲಕ್ಷಣ ಗೋಚರವಾಗಿದೆ. ಜಿಲ್ಲೆಯ ಜನರ ಬಹುದಿನದ ಕನಸು ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗೆ ನೀರು ಹರಿಸುವುದು. ಈ ಹಿನ್ನೆಲೆಯಲ್ಲಿ ನಡೆದ ಹೋರಾಟ ಒಂದೆರಡಲ್ಲ. ಪತ್ರಕರ್ತರು, ಮಠಾಧಿಧೀಶರು, ಹೋರಾಟಗಾರರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಸೇರಿದಂತೆ ಎಲ್ಲರೂ ಇದಕ್ಕಾಗಿ ಧ್ವನಿ ಎತ್ತಿದ್ದಾರೆ.

ಯೋಜನೆ ಮಂಜೂರಾಗಿ ಕಳೆದೊಂದು ದಶಕದಿಂದ ಭದ್ರಾ ಕಾಮಗಾರಿ ನಡೆಯುತ್ತಲೇ ಇದೆ. ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಮೂಲಕ ಜಿಲ್ಲೆಗೆ ನೀರು ತರುವ ಸಂಕಲ್ಪವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳು, ಹೋರಾಟಗಾರರು ಮಾಡಿದ್ದಾರೆ. ಈಗ ನೀರು ಹರಿಸಲು ದಿನಗಣನೆ ಆರಂಭವಾಗಿದೆ.

ಅಂತೆ ಕಂತೆಗಳ ಸಂತೆ : ಭದ್ರಾ ಎಂಬ ಎರಡು ಅಕ್ಷರಗಳು ಇಡೀ ಜಿಲ್ಲೆಯ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿಬಿಟ್ಟಿವೆ. ನೀರು ಬಿಟ್ಟರಂತೆ, ಅಲ್ಲಿ ಬಂತಂತೆ, ಇಲ್ಲಿ ಬಂತಂತೆ. ಇವತ್ತು ಮಾರಿಕಣಿವೆ ಸೇರುತ್ತಂತೆ… ಹೀಗೆ ಅಂತೆ ಕಂತೆಗಳ ಸಂತೆಯೇ ಜಿಲ್ಲೆಯ ಜನರ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಅಂತೆ ಕಂತೆಗಳೆಲ್ಲಾ ಸುಳ್ಳು ಎಂದು ತಳ್ಳಿ ಹಾಕುವಂತಿಲ್ಲ....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vMzTSgAA

📲 Get Chitradurga News on Whatsapp 💬