ಮೈಸೂರು ದಸರಾದಲ್ಲಿ ಪ್ರವಾಹ ನಿಭಾಯಿಸಿದ ಸ್ಥಿ ತಿ ಅನಾವರಣ

  |   Yadgirinews

ಅನೀಲ ಬಸೂದೆ

ಯಾದಗಿರಿ: ಗಡಿ ಜಿಲ್ಲೆ ಯಾದಗಿರಿಯಲ್ಲಿ ಬರಗಾಲವಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಕೃಷ್ಣಾ ಮತ್ತು ಭೀಮೆಯ ರೌದ್ರ ನರ್ತನದಿಂದ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ನಿಭಾಯಿಸಿರುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಗಳ ಮೂಲಕ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶಿಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.

ಜಿಲ್ಲೆಯ ನಾರಾಯಣಪುರ ಜಲಾಶಯ ಮತ್ತು ಸನ್ನತಿ ಬ್ಯಾರೇಜ್‌ಗೆ ಮಹಾರಾಷ್ಟ್ರದ ನೀರು ಹರಿಬಿಟ್ಟಿದ್ದರಿಂದ ನದಿ ಪಾತ್ರಕ್ಕೆ ನೀರು ಹರಿಸಿದ್ದು ಅವಾಂತರ ಸೃಷ್ಟಿಸಿತ್ತು. ಇದರಿಂದಾಗಿ ಜಿಲ್ಲೆಯ ವಡಗೇರಾ, ಶಹಾಪುರ, ಹುಣಸಗಿ ಹಾಗೂ ಸುರಪುರ ತಾಲೂಕಿನ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ

ಸುಮಾರು 28ಕ್ಕೂ ಹೆಚ್ಚು ಗ್ರಾಮಗಳ 7260 ಜನರು ಸಂತ್ರಸ್ತರಾಗಿದ್ದರು. ಅಲ್ಲದೇ ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿದ್ದನ್ನು ಪ್ರತ್ಯಕ್ಷವಾಗಿ ನೋಡದಿದ್ದರೂ ಕಷ್ಟದ ಸ್ಥಿತಿ ಎದುರಿಸಿ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದನ್ನು ಚಿತ್ರಗಳು ಕಣ್ಮುಂದೆ ಕಟ್ಟುವಂತಿವೆ.

ಜಿಲ್ಲಾ ಪಂಚಾಯಿತಿ ಸ್ತಬ್ಧಚಿತ್ರವು ಮುಂದೆ ಅಂಬಿಗರ ಚೌಡಯ್ಯನವರ ಮೂರ್ತಿ ಹೊಂದಿರಲಿದ್ದು, ಈಗಾಗಲೇ ಮೂರ್ತಿ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಈ ಸ್ತಬ್ಧಚಿತ್ರ ತುಮಕೂರ ಜಿಲ್ಲೆಯ ಕಲಾವಿದ ಯೋಗೇಶ ಎಂಬುವವರು ತಯಾರಿಸುತ್ತಿದ್ದಾರೆ.

ರಾಷ್ಟ್ರ ಮತ್ತು ರಾಜ್ಯದ ವಿಪತ್ತು ತಂಡಗಳು ಆಗಮಿಸುವುದಕ್ಕಿಂತ ಮುಂಚೆ ನದಿ ಪಾತ್ರದಲ್ಲಿರುವ ಅಂಬಿಗರು ಜನರನ್ನು ಸಂಕಷ್ಟದಿಂದ ಪಾರು ಮಾಡಲು ಸಾಕಷ್ಟು ಶ್ರಮಿಸಿದ್ದರು. ಹೀಗಾಗಿ ಅಂಬಿಗ ಕಾಯಕ ಮಾಡುತ್ತಿದ್ದ ಶೇಷ್ಠ ವಚನಕಾರ ಚೌಡಯ್ಯ ಅವರಿಗೆ ಗೌರವಿಸುವ ಕಾರ್ಯ ಇದಾಗಿದೆ....

ಫೋಟೋ - http://v.duta.us/hG8lzgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4N8MOQAA

📲 Get Yadgiri News on Whatsapp 💬