ರಾಗಿ ಪೈರಿಗೆ ಹುಳುಗಳ ಕಾಟ; ರೈತನಿಗೆ ಆಘಾತ

  |   Tumkurnews

ಹುಳಿಯಾರು: ಹುಳಿಯಾರು ಹೋಬಳಿಯ ಕುರಿಹಟ್ಟಿ ಪ್ರದೇಶದಲ್ಲಿ ರಾಗಿ ಪೈರು ತಿನ್ನುವ ಹುಳುಗಳ ಕಾಟ ಆರಂಭವಾಗಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಕ್ಕೀಡು ಮಾಡಿದೆ.

ಗಾಯದ ಮೇಲೆ ಬರೆ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೆಸರು ಕಾಳು ಬಿತ್ತಲಾಗದೆ ನಿರಾಸೆಗೊಳಗಾಗಿದ್ದ ರೈತನಿಗೆ ರಾಗಿ ಬಿತ್ತನೆಗೆ ಒಳ್ಳೆಯ ಮಳೆಯಾಗಿತ್ತು. ಪರಿಣಾಮ ಹುಳಿಯಾರು ಮತ್ತು ಹಂದನಕೆರೆ ಹೋಬಳಿಯ ಬಹುತೇಕ ರೈತರು ರಾಗಿ ಬಿತ್ತಿದ್ದರು. ನಂತರದ ದಿನಗಳಲ್ಲೂ ಆಗಾಗ ಮಳೆ ಬಿದ್ದ ಪರಿಣಾಮ ರಾಗಿ ರೈತನ ಕೈ ಹಿಡಿಯುವ ಭರವಸೆ ಮೂಡಿಸಿತ್ತು. ಸಾಲ ಸೋಲ ಮಾಡಿ ಸರದಿಯಲ್ಲಿ ನಿಂತು ಕಿತ್ತಾಡಿ ಗೊಬ್ಬರ ತಂದು ಉತ್ತಮ ಇಳುವರಿ ಎದುರು ನೋಡುತ್ತಿದ್ದ. ರಾಗಿಯೂ ಉತ್ತಮ ಫಸಲು ಬಂದೇ ಬರುವ ಲಕ್ಷಣದಂತೆ ಎತ್ತ ನೋಡಿದರೂ ಹುಲುಸಾಗಿ ಬೆಳೆದಿತ್ತು. ಈ ಬಾರಿ ರಾಗಿ ರೈತನ ಕೈ ಹಿಡಿಯುತ್ತದೆ ಎನ್ನುವಷ್ಟರಲ್ಲಿ ಹುಳುಗಳ ಕಾಟ ಆರಂಭವಾಗಿ ಗಾಯದ ಮೇಲೆ ಬರೆಹಾಕಿದಂತಾಗಿದೆ.

ರಾಗಿ ಪೈರಿನಲ್ಲಿ ಶಕ್ತಿ ಕುಂಠಿತ: ಗಾಣಧಾಳು ಗ್ರಾಪಂ ವ್ಯಾಪ್ತಿಯ ಕುರಿಹಟ್ಟಿ ಭಾಗದ ರಾಗಿ ಬೆಳೆಗೆ ಹಸಿರು ಹುಳು ಕಾಟ ಹೆಚ್ಚಾಗಿ ಕಂಡು ಬಂದಿದೆ. ರಾಗಿ ಬೆಳೆಯಲ್ಲಿ ಕಾಣಿಸಿದ್ದ ಈ ಹುಳು ಕಾಂಡದಿಂದ ಗರಿ ತಿನ್ನುತ್ತ ಬರುತ್ತಿದೆ. ಪರಿಣಾಮ ಗರಿಗಳು ತುಂಡಾಗಿ ಬಿದ್ದು, ರಾಗಿ ಪೈರಿನಲ್ಲಿ ಶಕ್ತಿ ಕುಂಠಿತವಾಗುತ್ತಿದೆ. ಹೀಗೆ ಹುಲ್ಲಿನ ಪ್ರಮಾಣ ಕಡಿಮೆಯಾಗಿ ತೆನೆ ನಿರೀಕ್ಷಿತ ಪ್ರಮಾಣದಲ್ಲಿ ಕಾಳು ಕಟ್ಟದೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ....

ಫೋಟೋ - http://v.duta.us/AX05IwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/U7HRJgAA

📲 Get Tumkur News on Whatsapp 💬