ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿರೋಧ

  |   Uttara-Kannadanews

ಅಂಕೋಲಾ: ತಾಲೂಕಿನ ಅಲಗೇರಿಯಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣದ ವಿರುದ್ಧ ಸೆ. 27ರಂದು ಅಲಗೇರಿ ಗ್ರಾಮಸ್ಥರುವಿನೂತನ ರೀತಿಯಲ್ಲಿ ಪ್ರತಿಭಟಿಸಲಿದ್ದಾರೆ. ತಾವು ಸಾಕಿರುವ ಆಕಳು, ಎತ್ತು, ನಾಯಿ, ಬೆಕ್ಕು, ಕೋಳಿ ಹಾಗೂ ಕೃಷಿ ಪರಿಕರಗಳೊಂದಿಗೆ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಲಿದ್ದಾರೆ ಎಂದು ಉದ್ಯಮಿ ಸುರೇಶ ನಾಯಕ ಅಲಗೇರಿ ತಿಳಿಸಿದರು.

ಅಲಗೇರಿಯ ಪ್ರಾಥಮಿಕ ಶಾಲೆ ಆವಾರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೌಕಾನೆಲೆ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಅವರು ಮಾತನಾಡಿ, ನೌಕಾನೆಲೆ, ಚತುಷ್ಪದ ಹೆದ್ದಾರಿ, ಕೊಂಕಣ ರೈಲ್ವೆ ಸೇರಿದಂತೆ ಒಂದಿಲ್ಲೊಂದು ಯೋಜನೆಗಳು ಅಲಗೇರಿ ಗ್ರಾಮವನ್ನು ಈಗಾಗಲೇ ವ್ಯಾಪಿಸಿಕೊಂಡಿದೆ. ಅತಂತ್ರರಾಗಿರುವ ಗ್ರಾಮಸ್ಥರಿಗೆ ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿರುವ ಬೆನ್ನಲ್ಲೆ ಸರಕಾರ ಅಲಗೇರಿಯಲ್ಲಿ ವಿಮಾನ ನಿಲ್ದಾಣ ಯೋಜನೆ ಬಂದಿದೆ. ಈ ಯೋಜನೆ ಕೈ ಬಿಡಬೇಕು. ಇಲ್ಲದಿದ್ದರೆ ಜೈಲಿಗಾದರು ಹೋಗುವೆವು. ಒಂದಿಂಚು ಭೂಮಿ ಬಿಡುವುದಿಲ್ಲ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಮಂಜುನಾಥ ನಾಯಕ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷ ವಿನೋದ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಗತಿಸಿದರು. ಅಲಗೇರಿಯ ಪ್ರಾಥಮಿಕ ಪ್ರಮುಖರಾದ ಸುರೇಶ ವೆರ್ಣೇಕರ, ವಿನಾಯಕ ನಾಯ್ಕ, ಗಣೇಶ ಚಿನ್ನಾ ನಾಯ್ಕ, ತಿಪ್ಪಾ ಸಾಳು ಗೌಡ, ತಾಕು ನಾಯ್ಕ, ಗಣಪತಿ ನಾಯ್ಕ, ಶ್ರೀಕಾಂತ ನಾಯ್ಕ, ಮೊಕ್ತೇಶರ ಶೇಷಗಿರಿ ನಾಯ್ಕ, ಶಿವಾನಂದ ನಾಯ್ಕ,ಪೂರ್ಣಿಮಾ ನಾಯ್ಕ, ಲಕ್ಷ್ಮಣ ನಾಯಕ, ಹಮ್ಮಣ್ಣ ನಾಯಕ, ರಾಜು ನಾಯಕ, ವಿಜಯಕುಮಾರ ಗಾಂವಕರ, ಮಹೇಶ ಗೌಡ ಬಡಗೇರಿ ಸೇರಿಂದತೆ ಹಲವರು ಇದ್ದರು.

ಫೋಟೋ - http://v.duta.us/bSNCJgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/YG856QAA

📲 Get Uttara Kannada News on Whatsapp 💬