ವರ್ಷದಲ್ಲಿ ತಾಲೂಕಿಗೆ ನೀರು

  |   Davanagerenews

ಜಗಳೂರು: 15 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್‌.ವಿ. ರಾಮಚಂದ್ರ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.

ಭಾನುವಾರ ತಾಲೂಕಿನ ರಂಗಪುರ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು.

ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಇದಾಗಿದ್ದು, ಕಳೆದ 70 ವರ್ಷಗಳಲ್ಲಿ ಬಹುತೇಕ ಕಾಲ ಬರಗಾಲಕ್ಕೆ ತುತ್ತಾಗಿದೆ. ಈ ಬಾರಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಮಳೆ ಇಲ್ಲದೇ ಫಸಲಿಗೆ ಬಂದ ಬೆಳೆ ಕೈಗೆ ಸಿಗದಂತಾಗುತ್ತಿದೆ ಎಂದರು.

ಸಿರಿಗೆರೆ ಶ್ರೀಗಳ ಕೃಪೆಯಿಂದ ತಾಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 350 ಕೋಟಿ ರೂ ಬಿಡುಗಡೆಯಾಗಿದ್ದು, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ 2.40 ಟಿಎಂಸಿ ನೀರು ಜಗಳೂರಿಗೆ ಮಂಜೂರಾಗಿದೆ. ಈ ಎರಡೂ ಕಾಮಗಾರಿಗಳಿಗೆ ಇನ್ನೆರಡು ತಿಂಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಇನ್ನೊಂದು ವರ್ಷದಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಹೇಳಿದರು.

ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಮುಂಜೂರು ಮಾಡಿದ್ದರು. ಈಗ ಅವರೇ ಮತ್ತೆ ಮುಖ್ಯಮಂತ್ರಿಯಾಗಿ ತಾಲೂಕಿಗೆ 2.40 ಟಿ ಎಂ ಸಿ ನೀರು ಮುಂಜೂರು ಮಾಡಿದ್ದಲ್ಲದೇ ತಾಲೂಕಿನ 53 ಕೆರೆಗಳಿಗೆ ನೀರು ತುಂಬಿಸಲು ಅನುಮೋದನೆ ನೀಡಿ ಹಣ ಸಹ ಬಿಡುಗಡೆ ಮಾಡಿದ್ದಾರೆ ಎಂದರು....

ಫೋಟೋ - http://v.duta.us/IDmhiwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/9UFqSgAA

📲 Get Davanagere News on Whatsapp 💬