ಶ್ರೀ ಕೃಷ್ಣ ಮಠದಲ್ಲಿ ವೈಭವದ ಕೋಟಿ ತುಳಸಿ ಅರ್ಚನೆ ಸಂಪನ್ನ

  |   Udupinews

ಉಡುಪಿ: ಶ್ರೀಕೃಷ್ಣ ಮಠದಲ್ಲಿ ರವಿವಾರ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಕೋಟಿ ತುಳಸಿ ಅರ್ಚನೆ ಸಂಪನ್ನ ಗೊಂಡಿತು.

ಜಿಲ್ಲೆಯ 28 ವಲಯಗಳ ಬ್ರಾಹ್ಮಣ ಸಂಘಗಳ ಸುಮಾರು 2,800 ಸದಸ್ಯರು ಪಾಲ್ಗೊಂಡು ವಿಷ್ಣು ಸಹಸ್ರನಾಮ ಪಾರಾಯಣವನ್ನು ತಲಾ ನಾಲ್ಕು ಬಾರಿ ನಡೆಸಿಕೊಟ್ಟರು. ಹಾಸನ,ಬೆಂಗಳೂರು,ಪಂಢರಪುರ,ಹೊಳೆ ನರಸೀಪುರ, ಮೈಸೂರು ಮೊದಲಾದೆಡೆಗಳಿಂದ ತುಳಸಿ ದಳಗಳನ್ನು ಭಕ್ತರು ನೀಡಿದ್ದರು.

ಶ್ರೀ ಪಲಿಮಾರು ಮಠಾಧೀಶ ರಲ್ಲದೆ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅರ್ಚನೆಗಳನ್ನು ನಡೆಸಿಕೊಟ್ಟರು.

ಗರ್ಭಗುಡಿಯಲ್ಲಿರುವ ವಿಗ್ರಹಕ್ಕೆ ಅರ್ಚನೆ ನಡೆದಂತೆ ರಾಜಾಂಗಣ ದಲ್ಲಿಯೂ ಶ್ರೀಕೃಷ್ಣನ ಪ್ರತಿಮೆಗೆ ಅರ್ಚನೆಗಳನ್ನು ಸ್ವಾಮೀಜಿಯವರು ನಡೆಸಿಕೊಟ್ಟರು.

ಆಶೀರ್ವಚನ ನೀಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶಾಸ್ತ್ರದ ಸಾರ ಮಹಾಭಾರತ. ಅದರಲ್ಲಿಯೂ ಗೀತೆ ಮತ್ತು ವಿಷ್ಣು ಸಹಸ್ರನಾಮ ಮಹಾಭಾರತದ ಸಾರ ವಾಗಿದೆ. ಗೀತೆ ಕೃಷ್ಣಗೀತೆಯಾದರೆ, ವಿಷ್ಣುಸಹಸ್ರನಾಮ ಭಕ್ತ ಭೀಷ್ಮರು ದೇವರ ಅನೇಕ ನಾಮಗಳನ್ನು ಕೊಂಡಾಡಿದ ಭಕ್ತಗೀತೆ. ಇದರ ಒಂದೊಂದು ನಾಮವೂ ನೂರು ನಾಮಗಳನ್ನು ಕೊಡುತ್ತಿದೆ. ನಮಗೆ ನಾಲಗೆ ಮತ್ತು ದೇವರ ನಾಮಗಳೆರಡೂ ಇರುವಾಗ ನಾವು ಅವುಗಳನ್ನು ಉಪಯೋಗಿಸುತ್ತಿಲ್ಲ. ಇಂತಹ ಅಮೂಲ್ಯ ವಿಷ್ಣುಸಹಸ್ರನಾಮದ ಪಾರಾಯಣದಿಂದ ಜಗತ್ತಿಗೆ, ದೇಶಕ್ಕೆ ಕಲ್ಯಾಣವಾಗಲಿ ಎಂದು ಹಾರೈಸಿದರು....

ಫೋಟೋ - http://v.duta.us/RLLRVwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NrwbDgAA

📲 Get Udupi News on Whatsapp 💬