ಸಿಗ್ನಲ್‌ ಸಮಸ್ಯೆಯಿಂದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

  |   Bangalore-Citynews

ಬೆಂಗಳೂರು: ಸಿಗ್ನಲ್‌ನಲ್ಲಿ ಕಂಡುಬಂದ ಸಮಸ್ಯೆಯಿಂದಾಗಿ “ನಮ್ಮ ಮೆಟ್ರೋ’ ಸೇವೆಯಲ್ಲಿ ಭಾನುವಾರ ಸುಮಾರು ಎರಡು ತಾಸು ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದರು. ಯಲಚೇನಹಳ್ಳಿ-ನಾಗಸಂದ್ರ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಮಧ್ಯಾಹ್ನ 12.06ರಿಂದ 1.52ರವರೆಗೆ ಯಲಚೇನಹಳ್ಳಿ-ಆರ್‌.ವಿ.ರಸ್ತೆ ನಡುವೆ ಸೇವೆ ಸ್ಥಗಿತಗೊಂಡು ನೂರಾರು ಪ್ರಯಾಣಿಕರಿಗೆ ಅದರ ಬಿಸಿ ತಟ್ಟಿತು.

ಏಕಾಏಕಿ ಕಾಣಿಸಿಕೊಂಡ ಸಮಸ್ಯೆಯಿಂದ ಜನ ಮೆಟ್ರೋ ನಿಲ್ದಾಣಗಳಿಗೆ ಬಂದು ಬೇಸರದಿಂದ ಹಿಂತಿರುಗುತ್ತಿರುವುದು ಕಂಡುಬಂತು. ಈ ವೇಳೆ ಆರ್‌.ವಿ.ರಸ್ತೆ, ಬನಶಂಕರಿ, ಜೆ.ಪಿ. ನಗರ ಮತ್ತು ಯಲಚೇನಹಳ್ಳಿ ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ವ್ಯತ್ಯಯ ಉಂಟಾಗಿ, ಆರ್‌.ವಿ. ರಸ್ತೆಯಿಂದ ನಾಗಸಂದ್ರವರೆಗೆ ಮಾತ್ರ ಮೆಟ್ರೋ ಸೇವೆ ಲಭ್ಯವಿತ್ತು.

“ಸಿಗ್ನಲ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಆಯಿತು. ದೋಷ ಪರಿಹರಿಸಿದ್ದು, ಮಧ್ಯಾಹ್ನ 1.52ರ ಸುಮಾರಿಗೆ ಸೇವೆ ಯಥಾಸ್ಥಿತಿಗೆ ಮರಳಿದೆ’ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಏನಿದು ಸಿಗ್ನಲಿಂಗ್‌ ಸಮಸ್ಯೆ?: ಒಂದೇ ಹಳಿಯಲ್ಲಿ ಯಾವ ರೈಲು ಎಲ್ಲಿದೆ ಎಂಬುದನ್ನು ಸಿಗ್ನಲಿಂಗ್‌ ವ್ಯವಸ್ಥೆ ತಿಳಿಸುತ್ತದೆ. ಇಂತಹ ಸಂವಹನ ಸಮರ್ಪಕವಾಗಿ ನಡೆಯದಿದ್ದರೆ, ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಆ ಹಳಿಯಲ್ಲಿನ ಉಳಿದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ....

ಫೋಟೋ - http://v.duta.us/cld-4QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Lp-AEgAA

📲 Get Bangalore City News on Whatsapp 💬