ಸಭೆಯ ಗದ್ದಲದ ನಡುವೆ ಸಿಇಒ ನೇಮಕಕ್ಕೆ ನಿರ್ಣಯ

  |   Ramnagaranews

ರಾಮನಗರ: ಬಿಡದಿಯ ರೈತರ ಸೇವಾ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಗದ್ದಲ, ಗೊಂದಲದಲ್ಲಿ ಮುಕ್ತಾಯವಾಯಿತು. ಸಂಘದಲ್ಲಾಗಿರುವ ಅವ್ಯವಹಾರಗಳ ತನಿಖೆ ಮುಗಿಯುವವರೆಗೂ ಸರ್ವ ಸದಸ್ಯರ ಸಭೆ ಬೇಡ ಮುಂದೂಡಿ ಎಂಬ ಆಗ್ರಹಗಳ ನಡುವೆ ಸಿಇಒ ನೇಮಕ ಸೇರಿದಂತೆ ಕೆಲವು ಪ್ರಮುಖ ವಿಷಯಗಳಿಗೆ ನಿರ್ಣಯ ಕೈಗೊಳ್ಳಲಾಗಿದೆ.

ಬಿಡದಿಯ ರೈತ ಸಮುದಾಯ ಭವನದಲ್ಲಿ ಭಾನುವಾರ ಬೆಳಗ್ಗೆ ಸರ್ವ ಸದಸ್ಯರ ಸಭೆ ಉದ್ಘಾಟನೆಯಾಗುತ್ತಲೇ ಕೆಲವು ಸದಸ್ಯರು ಸಂಘದ ವಿರುದ್ಧ ಗಂಭೀರ ಆರೋಪಗಳಿವೆ. ಸದರಿ ಆರೋಪಗಳ ತನಿಖೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆಜ್ಞೆ ಮಾಡಿದ್ದಾರೆ. ತನಿಖೆ ಕಳೆದ ಜುಲೈನಲ್ಲಿ ಆರಂಭವಾಗಿದೆ, 90 ದಿನಗಳಲ್ಲಿ ವರದಿ ಕೈಸೇರಲಿದೆ. ಅಲ್ಲಿಯವರೆಗೂ ಸರ್ವ ಸದಸ್ಯರ ಸಭೆ ಬೇಡ ಎಂದು ಒತ್ತಾಯಿಸಿದರು.

ಸಹಾಯಕ ನಿಬಂಧಕರಿಗೆ ಪ್ರಸ್ತಾವನೆ ಕಳಿಸಿ: ಸಂಘದ ಸದಸ್ಯರಾದ ರೇಣುಕಯ್ಯ, ಬಾನಂದೂರು ಬಸವರಾಜು ಮತ್ತು ನಂಜುಂಡಿ ಮಾತನಾಡಿ, ಸಂಘದಲ್ಲಿ ಗುಮಾಸ್ತ ಹುದ್ದೆಯಲ್ಲಿದ್ದವರನ್ನೇ ಪ್ರಭಾರ ಸಿಒಇ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತೆ ನೇಮಕ ಮಾಡಿಕೊಳ್ಳಲಾಗಿದೆ. ಸಂಘವು ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ, ಶೀಘ್ರವೇ ಹೊಸ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲು ನಿರ್ಣಯ ಕೈಗೊಂಡು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಪ್ರಸ್ತಾವನೆ ಕಳುಹಿಸುವಂತೆ ಒತ್ತಾಯಿಸಿದರು....

ಫೋಟೋ - http://v.duta.us/Jy5IwAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Twe0fgAA

📲 Get Ramnagara News on Whatsapp 💬