ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರವಾಗಲಿ

  |   Bellarynews

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ತಾಲೂಕು ಭೌಗೋಳಿಕವಾಗಿ 4 ತಾಲೂಕುಗಳ ಮದ್ಯ ಇರುವುದರಿಂದ ಜಿಲ್ಲಾ ಕೇಂದ್ರವನ್ನಾಗಿಸಲು ಸೂಕ್ತವಾಗಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.

ಹಗರಿಬೊಮ್ಮನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವಂತೆ ಒತ್ತಾಯಿಸಿ ನಡೆಸಿದ ಹಗರಿಬೊಮ್ಮನಹಳ್ಳಿ ಬಂದ್‌ ಹಿನ್ನೆಲೆಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಭಾನುವಾರ ಅವರು ಮಾತನಾಡಿದರು.

ಕಾನೂನಾತ್ಮಕವಾಗಿ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತವಾಗಿದೆ. ಉಪ ಚುನಾವಣೆ ನೀತಿಸಂಹಿತೆ ನಂತರ ಮುಖ್ಯಮಂತ್ರಿ ಬಳಿ ನಿಯೋಗ ಹೋಗಿ ಗಮನ ಸೆಳೆಯಲಾಗುವುದು. ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಮೂಲಕ ಹರಪನಹಳ್ಳಿ ಹೂವಿನಹಡಗಲಿ ಕೂಡ್ಲಿಗಿ ಕೊಟ್ಟೂರಿನ ತಾಲೂಕಿನ ಜನತೆಗೆ ಆಡಳಿತಾತ್ಮಕವಾಗಿ ತ್ವರಿತ ಸೇವೆ ಒದಗಿಸಬಹುದಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸ ಜಿಲ್ಲೆ ರಚಿಸುವ ಮುನ್ನ ಜಿಲ್ಲೆಯ ಎಲ್ಲ ಕ್ಷೇತ್ರದ ಶಾಸಕರ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.

ಪ್ರಮುಖವಾಗಿ ಪಶ್ಚಿಮ ತಾಲೂಕುಗಳಲ್ಲಿ ಭೌಗೋಳಿಕವಾಗಿ ಎಲ್ಲ ತಾಲೂಕುಗಳನ್ನು ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸಬಹುದಾದ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಈ ಕುರಿತಂತೆ ಕಾನೂನು ಹೋರಾಟ ಮಾಡಲಾಗುವುದು. ಹೊಸ ಜಿಲ್ಲೆಗೆ ಹೈಕ.371 ಜೆ. ವಿಶೇಷ ಮೀಸಲು ಸೌಲಭ್ಯ ಲಭ್ಯತೆ ಕುರಿತಂತೆ ಸರಕಾರ ಸ್ಪಷ್ಟಪಡಿಸಬೇಕು ಎಂದರು....

ಫೋಟೋ - http://v.duta.us/w89fHgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/T7mnJQAA

📲 Get Bellary News on Whatsapp 💬